Oplus_131072

ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಮುಕ್ತಾಯಗೊಂಡಿದ್ದು, ಮತದಾರರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಇಂದು ಸಂಜೆ 5 ಗಂಟೆವರೆಗೆ ಶಿಗ್ಗಾಂವ್ ನಲ್ಲಿ 75.07% ಮತ್ತು ಸಂಡೂರಿನಲ್ಲಿ 71.47% ರಷ್ಟು ಮತದಾನವಾಗಿದ್ದು, 84.26% ರಷ್ಟು ಮತದಾನವಾಗಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮತ್ತು ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಡುವೆ ಭಾರೀ ಪೈಪೋಟಿ ಇದೆ ಎನ್ನಲಾಗುತ್ತಿದ್ದು, ಇಬ್ಬರಲ್ಲಿ ಯಾರು ಶಾಸಕರಾಗಲಿದ್ದಾರೆ ಎಂಬುದನ್ನು ಮದಾರರು ನಿರ್ಣಯಿಸಲಿದ್ದಾರೆ.

Oplus_131072

ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಯಾಸೀರ್ ಖಾನ್ ಪಠಾಣ್ ಮತ್ತು ಎನ್​ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ನಡುವೆ ಬಿಗ್ ಫೈಟ್ ಇದೆ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಒಟ್ಟು 2,37,525 ಮತದಾರರಿದ್ದು, ಈ ಪೈಕಿ 1,21,443 ಪುರುಷರು ಮತ್ತು 1,16,076 ಮಹಿಳೆಯರು ಹಾಗೂ ಇತರ 6 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 241 ಮತಗಟ್ಟೆಗಳಿದ್ದು ಅವುಗಳಲ್ಲಿ 92 ಸೂಕ್ಷ್ಮ ಮತಟ್ಟೆಗಳಿವೆ.

ಸಂಡೂರು ಕ್ಷೇತ್ರದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಮತ್ತು ಕಾಂಗ್ರೆಸ್​ನಿಂದ ಅನ್ನಪೂರ್ಣ ತುಕಾರಾಂ ಸ್ಫರ್ಧೆಗೆ ಇಳಿದಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆಗಳಿದ್ದು, ಅವುಗಳಲ್ಲಿ 60 ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.ನವೆಂಬರ್ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Oplus_131072

Leave a Reply

Your email address will not be published. Required fields are marked *