ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೇಕೇರಿ ಎಲ್ಲೆಡೆ ಕಸದ ಆಗರವಾಗಿದೆ. ಈ ಬಗ್ಗೆ ಕಸ ವಿಲೇವಾರಿ ಘಟಕ, ಆಗುಂಬೆ ಗ್ರಾಮ ಪಂಚಾಯಿತಿ, ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಮೌನ ವಹಿಸಿದ್ದು ಸಾರ್ವಜನಿಕರ ಅಕ್ರೋಷಕ್ಕೆ ಕಾರಣವಾಗಿದೆ.ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿ ಕಸ ಮುಕ್ತ ಊರು ಎಂಬ ಹೆಗ್ಗಳಿಕೆಗೆ ಮೊದಲ ಸ್ಥಾನ ಪಾತ್ರವಾಗಿದೆ ನಮ್ಮ ಹೆಮ್ಮೆಯ ಊರು

ಗುಡ್ಡೆಕೇರಿ ಎಂದು ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಹಾಕಿ ಅಭಿನಂದನೆಗಳು ಗ್ರಾಮ ಪಂಚಾಯತ್ ಆಗುಂಬೆ. ಎಂದು ಬರೆದುಕೊಂಡು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇನ್ನು ವರದಿ ಬಳಿಕ ಅಧಿಕಾರಿಗಳು ಹಾಗೂ ಗ್ರಾಮ ಪಂ ಎಚ್ಚೆತ್ತುಕೊಳ್ಳದಿದ್ದಲ್ಲಿ ಕಸವನ್ನು ಗ್ರಾಮ ಪಂಚಾಯತ್ ಕಚೇರಿ ಮುಂದೆ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

Leave a Reply

Your email address will not be published. Required fields are marked *