ಹಿರಿಯ ನಟ ಎಂ.ಎಸ್. ಉಮೇಶ್‌ ಅವರಿಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ. ಇತ್ತೀಚೆಗೆ ಉಮೇಶ್‌ ಅವರು ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು, ಅವರ ಕಾಲು ಹಾಗೂ ಭುಜದ ಭಾಗಗಳ ಮೂಳೆಗೆ ಪೆಟ್ಟಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ವೇಳೆ ವೈದ್ಯರು ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್‌ ಮಾಡಿದಾಗ ಕ್ಯಾನ್ಸರ್‌ ಇರುವುದು ತಿಳಿದುಬಂದಿದೆ.ನಾಲ್ಕನೇ ಹಂತದಲ್ಲಿರುವ ಲಿವರ್‌ ಕ್ಯಾನ್ಸರ್‌ ಬೇರೆ ಅಂಗಗಳಿಗೆ ಹರಡಿರುವುದು ಪತ್ತೆಯಾಗಿದೆ. ಇಂಜಕ್ಷನ್ ಮೂಲಕವೇ ಗಡ್ಡೆ ಕರಗಿಸುವ ಪ್ರಯತ್ನ ನಡೆಯುತ್ತಿದೆ. ರಿಕವರಿ ಆಗುವ ಸಾಧ್ಯತೆ ಇದೆ. ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *