

ಮಲೆನಾಡು /ಕರಾವಳಿ :ಮಂಗಳವಾರ ಅಕ್ಟೋಬರ್ 7, 2025ರಂದು ಭೂಮಿ ಹುಣ್ಣಿಮೆ ಹಬ್ಬ ಆಚರಿಸಲಾಗುತ್ತದೆ. ಭೂಮಿ ಹುಣ್ಣಿಮೆಯು ದೇವಿಯನ್ನು ಪೂಜಿಸಲು ವಿಶೇಷ ದಿನವಾಗಿದೆ.ಅಂದು ತುಂಬು ಗರ್ಭಿಣಿಗೆ ಸೀಮಂತ ಶಾಸ್ತ್ರ ಮಾಡುವಂತೆ ಭೂಮಿ

ತಾಯಿಗೆ ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ ರಾತ್ರಿಯಿಡಿ ನಿದ್ದೆ ಬಿಟ್ಟು ಮಾಡಿದಂತಹ ಬೆಟ್ಟ ಗುಡ್ಡದಲ್ಲಿ ಸಿಗುವ ನೂರೊಂದು ಕುಡಿಯ ಪಲ್ಯ, ದೋಸೆ, ಹೀಗೆ ಹಲವಾರು ರೀತಿಯ ಅಡುಗೆಯನ್ನು ಭೂಮಿ ತಾಯಿಗೆ ಎಡೆ ಇಟ್ಟು ಪೂಜಿಸಿ

ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಹಬ್ಬದ ಅಡುಗೆಯನ್ನು ಎಲ್ಲೆಡೆ ಬೀರಲಾಗುತ್ತದೆ.ನಂತರ ಪೂಜೆಗೆ ತಂದ ಕೊಟ್ಟೆ ಕಡಬನ್ನು ಗದ್ದೆಯ ಒಂದು ಭಾಗದಲ್ಲಿ ಹೂಳಲಾಗುತ್ತದೆ(ಭತ್ತದ ಕೊಯ್ಲಿನ ಸಂದರ್ಭ ಈ ಕಡಬನ್ನು ಹೊರಗೆ ತೆಗೆಯುತ್ತಾರೆ. ಆ ದಿನ ಅಡುಗೆ ವೇಳೆ ಆ ಕಡಬು ಹಾಕಲಾಗುತ್ತದೆ. ಕೊಯ್ಲಿಗೆ ಬಂದವರಿಗೆಲ್ಲ ಪ್ರಸಾದದ ರೀತಿಯಲ್ಲಿ ಕೊಡಲಾಗುತ್ತದೆ.)

ಬಳಿಕ ನಿಧನರಾದ ಪೂರ್ವಜರಿಗೆ ಎಡೆ ಇಟ್ಟು ನಂತರ ಬೆಳಗ್ಗಿನ ಭೋಜನ ಸೇವಿಸುತ್ತಾರೆ. ಇನ್ನು ಈದಿನ ವಿಶೇಷವೇನೆಂದರೆ ಭೂಮಿ ಹುಣ್ಣಿಮೆ ದಿನ ರೈತರು ಭೂಮಿಯನ್ನು ಅಗೆಯುವುದಾಗಲಿ ಅಥವಾ ಗಾಯ ಮಾಡುವುದಾಗಲಿ ಮಾಡುವುದಿಲ್ಲ ಇದು ರೈತರು ಭೂಮಿ ತಾಯಿಗೆ ನೀಡುವ ವಿಶೇಷ ಗೌರವವಾಗಿದೆ.


