- ಮಲ್ಲೇಶ್ವರಂ ಕೆಇಎ ಕಚೇರಿ ಎದುರು ಎಬಿವಿಪಿ ಪ್ರತಿಭಟನೆ
- ವಿದ್ಯಾರ್ಥಿಗಳ ಜೊತೆಗೆ ಗುಂಡಾಗಳಂತೆ ವರ್ತಿಸಿದ ಪೊಲೀಸ್ ಸಿಬ್ಬಂದಿ

ಸಿಇಟಿ ಪರೀಕ್ಷೆಯಲ್ಲಿ 50ಕ್ಕೂ ಅಧಿಕ ಪಠ್ಯೇತರ ಪ್ರಶ್ನೆ ಕೇಳಿದ್ದ ಹಿನ್ನೆಲೆ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಆತಂಕ ಉಂಟಾಗಿದ್ದು, ಇದೇವೇಳೆ 2024 ಸಿಇಟಿ ಪರೀಕ್ಷೆ ಅವಾಂತರ ವಿರೋಧಿಸಿ ಕೆಇಎ ವಿರುದ್ಧ ಇಂದು ಎಬಿವಿಪಿ ಪ್ರತಿಭಟನೆ ಮಾಡಿರುವ ಹಿನ್ನೆಲೆ ಮಲ್ಲೇಶ್ವರಂನ ಕೆಇಎ ಕಚೇರಿಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿತ್ತು. 30 ಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಿದ್ದು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನ ಪೊಲೀಸರು ವಶಕ್ಕೆ ಪಡೆದರು. ಬಿಎಂಟಿಸಿ ಬಸ್‌ನಲ್ಲಿ ಎಬಿವಿಪಿ ಕಾರ್ಯಕರ್ತರನ್ನು ತುಂಬಿದ್ದು. ಈ ವೇಳೆ ಕುತ್ತಿಗೆಗೆ ಕೈ ಹಾಕಿ ಪೊಲೀಸರು ಗೂಂಡಾ ವರ್ತನೆ ಮಾಡಿದ್ದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಕ್ರೋಶ ವ್ಯಕ್ತವಾಗಿದೆ.ಇನ್ನು ಸಿಇಟಿ ಪರೀಕ್ಷೆ ಫಲಿತಾಂಶ ಗೊಂದಲ ಸೃಷ್ಟಿಯಾಗಿದ್ದು ಈ ಬಗ್ಗೆ ಕೆಇಎ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ.

