ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಂ ಪಂ ವ್ಯಾಪ್ತಿಯ ಚಂಗಾರು ಗ್ರಾಮದ ಸುಳುಗೋಡು ಚಂದ್ರಶೇಖರ ಉಡುಪರು (96) ನಿಧನರಾಗಿದ್ದಾರೆ.ಇವರು ಚಂಗಾರು ಗ್ರಾಮದ ಮಾಜಿ ಮುತ್ಸದಿ ರಾಜಕಾರಣಿಯಾಗಿದ್ದು, ಆಗಿನ ಕಾಲದಲ್ಲಿ ಚಂಗಾರು ಗ್ರಾಮದ ಉನ್ನತಿಯಲ್ಲಿ ಇವರ ಪಾಲು ದೊಡ್ಡದು, ದ್ವೀಪದಂತಿದ್ದ ಈ ಗ್ರಾಮಕ್ಕೆ ವಿದ್ಯುತ್ ಹಾಗೂ ರಸ್ತೆ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾದವರು ಜೊತೆಗೆ ಚಂಗಾರು ಸೇತುವೆ ವಿಚಾರದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಹೀಗೆ ತಮ್ಮ ಕರ್ತವ್ಯದ ಸಮಯದಲ್ಲಿ ಹಲವಾರು ಯೋಜನೆಗಳನ್ನು ಜನರಿಗೆ ಒದಗಿಸಿದವರು.

ಜನ ಸಂಘದಿಂದ ರಾಜಕೀಯ ಪ್ರವೇಶ ಪಡೆದ ಇವರು ತಾಲ್ಲೂಕು ಬೋರ್ಡ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ,ನಂತರ ಹೊನ್ನೇತಾಳು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಹೊನ್ನೇತಾಳು ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇಂದಿನ ಪೀಳಿಗೆಗೆ ಮಾದರಿಯಾಗಿ ಎಲ್ಲರ ಹೃದಯಲ್ಲಿ ಶಾಶ್ವತವಾಗಿ ನೆಲೆಸಿದವರು

ಇಂದು ಸೆ. 22ರಂದು ಕೊನೆಯುಸಿರೆಳೆದಿದ್ದು ತುಂಬಲಾರದ ನಷ್ಟವಾಗಿದೆ. ಚಂಗಾರು ಗ್ರಾಮಸ್ಥರು ಇವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.ಇವರ ಅಂತ್ಯಕ್ರಿಯೆಯು ಸೆ, 23 ರ ಬೆಳಿಗ್ಗೆ 9:30 ಕ್ಕೆ ಸುಳುಗೋಡಿನ ಮಾಲತಿ ನದಿ ತೀರದಲ್ಲಿ ಸಕಲ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದೂ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *