

ಚಿಕ್ಕಮಗಳೂರು : ತನ್ನನ್ನು ಬಿಟ್ಟು ಮತ್ತೆ ಪತಿಯೊಂದಿಗೆ ಹೋದಳು ಎಂಬ ಕಾರಣಕ್ಕೆ ಮಹಿಳೆಯೊಬ್ಬಳನ್ನು ಆಕೆಯ ಪ್ರಿಯತಮ ಬರ್ಬರವಾಗಿ ಹತ್ಯೆಗೈದು, ಕೃಷಿಹೊಂಡಕ್ಕೆ ಎಸೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ತೃಪ್ತಿ ಕೊಲೆಯಾಗಿರುವ ಮಹಿಳೆ. ಚಿರಂಜೀವಿ ಮಹಿಳೆಯನ್ನು ಕೊಲೆಗೈದಿರುವ ಆರೋಪಿಯಾಗಿದ್ದಾನೆ.ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿಯಲ್ಲಿ ಘಟನೆ ನಡೆದಿದ್ದು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



