ತೀರ್ಥಹಳ್ಳಿ : 2024-2025ನೇ ಸಾಲಿನ ಅತ್ಯುತ್ತಮ ಕರ್ನಾಟಕ ಸೇವರತ್ನ ಪ್ರಶಸ್ತಿಯನ್ನು ಕರ್ನಾಟಕ ನೇತಾಜಿ ಚಾರಿಟೆಬಲ್ ಟ್ರಸ್ಟ್ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನೀಡಲಿದ್ದು, ಕರ್ನಾಟಕ ಕೇಸರಿ ಪ್ರಶಸ್ತಿಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸಮಾಜ ಸೇವಕಿ ಹಾಗೂ ಶೃಂಗೇರಿಯ ಪ್ರಥಮ ಆಟೋ ಚಾಲಕಿ ಉಷಾ ಸತೀಶ್ ಆಯ್ಕೆಯಾಗಿದ್ದು,

ನವೆಂಬರ್ 1 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಾಡಿನ ಹೆಸರಾಂತ ಸ್ವಾಮಿಜಿಗಳು ಹಾಗೂ ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರದ ಬಹುಮುಖ ಗಣ್ಯರ ಅಮೃತಹಸ್ತದಿಂದ ಪ್ರಶಸ್ತಿಯನ್ನು ನೀಡಲಾಯಿತು.ಇದೇ ವೇಳೆ ಉಷಾ ಸತೀಶ್ ಇವರಿಗೆ ಪ್ರಶಸ್ತಿ ದೊರಕಿದ್ದು ಅವರ ಆಪ್ತ ಬಳಗ ಅಭಿನಂದನೆ ತಿಳಿಸಿದ್ದಾರೆ. ಇನ್ನಷ್ಟು ಹೆಚ್ಚು ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಅರಸಿ ಬರಲಿ ಎಂಬುದು ಸತ್ಯಶೋಧ ನ್ಯೂಸ್ ಮಾಧ್ಯಮದ ಆಶಾಯವಾಗಿದೆ.

Leave a Reply

Your email address will not be published. Required fields are marked *