- ಕೊಪ್ಪ ತಹಶೀಲ್ದಾರ್ ಹಾಗೂ ಆರ್ ಐ ಸ್ಥಳಕ್ಕೆ ಆಗಮಿಸುವಂತೆ ಪಟ್ಟು

ಕೊಪ್ಪ: ಕೊಪ್ಪ ತಾಲೂಕಿನ ಹೆರೂರು ಗ್ರಾಮ ಪಂಚಾಯತಿಯಲ್ಲಿ ಕಸ್ತೂರಿ ರಂಗನ್ ವರದಿ ಹಾಗೂ ಒತ್ತುವರಿ ಸಮಸ್ಯೆ ಮತ್ತು ಅರಣ್ಯ ಕಾಯ್ದೆಗಳಿಗೆ ಸಂಬಂಧಿಸಿದಂತೆ ಇಂದು 10.30ಕ್ಕೆ ವಿಶೇಷ ಸಭೆಯನ್ನು ಕರೆಯಲಾಗಿತ್ತು.ಈ ಸಭೆಗೆ ತಹಶೀಲ್ದಾರ್ ಮತ್ತು ಆರ್ ಐ ಗೆ ಆಹ್ವಾನ ನೀಡಲಾಗಿತ್ತು ಆದರೆ ಇವರುಗಳು ಸಭೆಗೆ ಗೈರಾದ ಹಿನ್ನಲೆ ಹೇರೂರು ಗ್ರಾಮ ಪಂಚಾಯತಿಯಲ್ಲಿ ಸಭೆ ಸೇರಿದ್ದ ರೈತರು ಆಕ್ರೋಶಗೊಂಡು ದಿಢೀರ್ ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.


