ತೀರ್ಥಹಳ್ಳಿ :ಸು 280 ಮಕ್ಕಳು ಓದುತ್ತಿರುವ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸೀಬಿನಕೆರೆ ಶಾಲೆಯಲ್ಲಿ ಅದ್ದೂರಿಯಾಗಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ರೆಹಮತ್ ಉಲ್ಲ ಅಸಾದಿ ಕಾರ್ಯಕ್ರಮ ಉದ್ಘಾಟಿಸಿದರು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಜೇಶ್ ರವರು ವಹಿಸಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಸುಶೀಲ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮದಾಸ್ ಪ್ರಭು ಹಾಗೂ ಎಸ್ಡಿಎಂಸಿಯ ಸದಸ್ಯರು ಹಾಗೂ ಮಹಾಬಲೇಶ್ವರ ಹೆಗಡೆ, ಶಾಲೆಯ ಮುಖ್ಯ ಶಿಕ್ಷಕಿ ಸಾವಿತ್ರಮ್ಮ ಉಪಸ್ಥಿತರಿದ್ದರು. ವಿಶೇಷವಾಗಿ ಪೋಷಕರೊಂದಿಗೆ ಮಹಾ ಸಭೆ ನಡೆಸಿ ಮಕ್ಕಳಿಗೆ ಶಾಲಾವತಿಯಿಂದ ವಿಶೇಷ ಉಪಹಾರದ ವ್ಯವಸ್ಥೆ ಹಾಗೂ ಎಸ್ ಡಿ ಎಂ ಸಿ ಕಮಿಟಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಐಸ್ ಕ್ರೀಮ್ ಹಾಗೂ ಎಲ್ಲ ಮಕ್ಕಳಿಗೂ ಗಿಫ್ಟ್ ನೀಡಲಾಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ ಪುಟಾಣಿ ಮಕ್ಕಳು ಪೋಷಕರು ಇದ್ದರು.

Leave a Reply

Your email address will not be published. Required fields are marked *