- ನೊಂದ ಪೋಷಕರಿಂದ ಮಾಧ್ಯಮಕ್ಕೆ ಸು 150 ಕರೆ
- – ಮಕ್ಕಳೇ.. ಮೊಬೈಲ್ ಗೀಳು ಬೇಡ ಪ್ಲೀಸ್

ಶಿವಮೊಗ್ಗ : ಜಿಲ್ಲೆಯ ಎಲ್ಲಾ ತಾಲೂಕುವಾರು ಕಳೆದ ಮೂರ್ನಾಲ್ಕು ತಿಂಗಳಿಂದ ಕಾಲೇಜು ವಿದ್ಯಾರ್ಥಿಗಳು ಆನ್ಲೈನ್ ಗೇಮಿಂಗ್ ಗೀಳು ಅತಿರೇಕಕ್ಕೆ ಏರಿದ್ದು ಮಕ್ಕಳ ಈ ವರ್ತನೆಗೆ ಪೋಷಕರು ಮರುಕ ಪಡುವಂತಾಗಿದೆ. ಇದುವರೆಗೂ ಸತ್ಯಶೋಧ ಮಾಧ್ಯಮಕ್ಕೆ ಸು 150 ಕರೆಗಳು ಬಂದಿದ್ದು ಇದಕ್ಕೆ ಸಂಬಂಧ ಪಟ್ಟಂತೆ ಕಾಲೇಜು ಪ್ರಾಂಶುಪಾಲರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು ವಿವಿಧ ಕಾಲೇಜು ಆವರಣದಲ್ಲಿ ಮೊಬೈಲ್ ಬಳಕೆ ನಿಷೇಧಿಸಿದ್ದು ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.ಅಂದಾಜು 17 ರಿಂದ 24 ವಯಸ್ಸಿನ ಯುವಕರಲ್ಲಿ ಮೊಬೈಲ್ ಬಳಕೆ ಅತಿಯಾಗಿದ್ದು, ಕೆಲವರು ಇದರಿಂದ ಆರೋಗ್ಯ ಸಮಸ್ಯೆ, ಪ್ರಾಣ ಕಳೆದು ಕೊಳ್ಳುವಂತ ಘಟನೆಗಳು ಬಹಳಷ್ಟು ವರದಿಯಾಗಿವೆ. ಪೋಷಕರು ಬಡತನದ ಬೇಗೆಯಲ್ಲಿದ್ದರು ತಮ್ಮ ಮಗನಿಗೆ ಉತ್ತಮ ವಿದ್ಯಾಭ್ಯಾಸ ಕಲಿಸಿ ಜೀವನ ರೂಪಿಸುವ ನಿಟ್ಟಿನಲ್ಲಿ ತಮ್ಮ ಕಷ್ಟ ಸುಖವನ್ನು ಬದಿಗಿಟ್ಟು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇನ್ನು ಪ್ರಪಂಚದ ಅರಿವೆ ಇರದ ಮಕ್ಕಳಿಗೆ ಮೊಬೈಲ್ ಹುಚ್ಚು ಹಿಡಿದು ಅದರಿಂದ ಅವರನ್ನು ಹೊರಬರೋದು ತುಂಬಾ ಕಷ್ಟಕರ ಎಂಬುದು ಪೋಷಕರ ಅಳಲಾಗಿದೆ.
ಮಕ್ಕಳೇ .. ನಿಮಗೊಂದು ಕಿವಿಮಾತು
ಮೊಬೈಲ್ ಬಳಕೆ ಮಾಡುವುದು ತಪ್ಪಲ್ಲ ಆದರೆ ಅದರಿಂದ ಏನು ಲಾಭವಿದೆ?ಆನ್ಲೈನ್ ಆಟಗಳು ನಿಮ್ಮನ್ನು ಕೆಟ್ಟ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ ವಿನಾಃ ನಿಮ್ಮ ಬುದ್ಧಿ ಶಕ್ತಿ ಅಥವಾ ಕಲಿಕೆಗೆ ಒತ್ತುಕೊಡದು. ನಿಮ್ಮ ಪೋಷಕರು ನಿಮ್ಮ ಬಗ್ಗೆ ಎಷ್ಟು ಕಾಳಜಿ ವಹಿಸುವರೋ ಹಾಗೆ ನೀವೂ ಕೂಡ ಅವರ ಜೊತೆಗೆ ಕಾಲ ಕಳೆದು ನೋಡಿ ಅವರ ಪ್ರೀತಿ ಏನು ಎಂಬುದು ಅರ್ಥವಾಗಲಿದೆ. ಹಾಗೆಯೇ ಇತರಿಗಿಂದ ಹೆಚ್ಚು ಅಂಕ ಗಳಿಸಿ ಸಾಧಿಸಿ ತೋರಿಸಿ ಅದು ಎಂದಿಗೂ ಭವಿಷ್ಯದ ಸಾಧನೆಯಾಗಲಿದೆ.ಟೀಂ ಸತ್ಯಶೋಧ ನ್ಯೂಸ್
ಆನ್ಲೈನ್ ಆಟಗಳು ಕೆಟ್ಟ ಪ್ರಚೋದನೆ ನೀಡುತ್ತಿದೆ ಅದರಿಂದ ಮಕ್ಕಳಲ್ಲಿ ಅನಾರೋಗ್ಯ, ಅಂಗ ವೈಫಲ್ಯ, ಹಾಗೂ ಪ್ರಾಣ ಕಳೆದುಕೊಂಡ ಘಟನೆ ನಮ್ಮ ಮದ್ಯೆಯೇ ನಡೆದಿದೆ ಇನ್ನಾದರೂ ಎಚ್ಚೆತ್ತುಕೊಂಡು ಮೊಬೈಲ್ ಗೆ ದಾಸರಗುವುದನ್ನು ನಿಲ್ಲಿಸಿ
ಗಜಾನನ ವಾಮನ ಸುತಾರ ಡಿವೈಎಸ್ಪೀ ತೀರ್ಥಹಳ್ಳಿ
ಕಾಲೇಜು ಹುಡುಗರು ಇತ್ತೀಚೆಗೆ ಮೊಬೈಲ್ ಗೆ ದಾಸರಾಗಿದ್ದು ಕಂಡು ಬರುತ್ತಿದೆ.ಪೋಷಕರು ಹಾಗೂ ಶಿಕ್ಷಕರು ಈ ಬಗ್ಗೆ ಗಮನ ಹರಿಸಬೇಕಿದೆ
– ಹಸಿರುಮನೆ ನಂದನ್