
ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶಿವರಾಜ್ ಪುರ ದ ಮುಳುಬಾಗಿಲು ಗ್ರಾಂ ಪಂ ಸದಸ್ಯರಾದ ಡಾ ಮಂಜುನಾಥ್ ಶೆಟ್ಟಿ ಇವರಿಗೆ 2025-25 ನೇ ಸಾಲಿನ ಅತ್ಯುತ್ತಮ ರಾಷ್ಟ್ರೀಯ ರತ್ನ ಪ್ರಶಸ್ತಿ ಯನ್ನು ಬೆಂಗಳೂರಿನಲ್ಲಿ ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಂಜುನಾಥ್ ಶೆಟ್ಟಿಯವರು ತೀರ್ಥಹಳ್ಳಿಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯ ಕರ್ತರು ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು ಕೊರೋನದಂತಹ ಅಪಾಯಕಾರಿ ಪರಿಸ್ಥಿತಿಯಲ್ಲೂ ತಮ್ಮ ಸೇವೆಯನ್ನು ಮಾಡಿದ್ದು ಜನತೆಗೆ ಇನ್ನು ನೆನಪಿದೆ.

ಅದಕ್ಕೆ ಉತ್ತಮ ಉದಾಹರಣೆಯಂತೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಮಂಜುನಾಥ್ ಶೆಟ್ಟಿಯವರಿಗೆ ಇನ್ನು ಹತ್ತು ಹಲವಾರು ಪ್ರಶಸ್ತಿಗಳು ಮೂಡಿಗೇರಲಿ ಎಂಬುದು ಸತ್ಯಶೋಧ ನ್ಯೂಸ್ ಆಶಯ.


