Oplus_131072

ಹೊದ್ದು ಮಲಗಿದ ಅಧಿಕಾರಿಗಳೇ, ಸಿಬ್ಬಂದಿಗಳೇ ಎಚ್ಚರ ವಹಿಸಿ – ಸ್ಥಳೀಯರ ಅಕ್ರೋಶ

ಕೊಪ್ಪ : ತಾಲ್ಲೂಕಿನ ಕುರುಕುಬಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಹಸು ಸಾವಾಗಿದೆ,ನಾಲೂರು ಅಶೋಕ್ ರವರು ಸಾಕಿದ್ದ ಹಸು ದಿ 22 ರಂದು ಮೇವು ಅರಸಿ ಹೋಗಿದ್ದಾಗ ಮಧ್ಯಾಹ್ನ 3 ಘಂಟೆಯ ಸಮಯದಲ್ಲಿ ಆಕಸ್ಮಿಕವಾಗಿವಿದ್ಯುತ್ ತಂತಿ ಕಟ್ ಆಗಿ ಬಿದ್ದಿದ್ದನ್ನು ಸ್ಪರ್ಶಿಸಿ ಈ ಘಟನೆ ಸಂಭವಿಸಿದೆ.

ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ, ಜಾನುವಾರು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಈ ಹಿಂದೆಯೂ ಕೂಡ ಇದೆ ರೀತಿ ಘಟನೆ ಸಂಭವಿಸಿದ್ದು, ವಿದ್ಯುತ್ ಅವಘಡ ತಪ್ಪಿಸುವಲ್ಲಿ ಮೆಸ್ಕಾಂ ಸಿಬ್ಬಂದಿ ವಿಫಲರಾಗಿದ್ದಾರೆ.

ಈ ಸಂಬಂಧ ಸಿಬ್ಬಂದಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಎಚ್ಚೆತ್ತು ಕೊಳ್ಳದ ಮೆಸ್ಕಾಂ ವಿರುದ್ಧ ಸ್ಥಳೀಯರು ಅಕ್ರೋಶ ಹೊರ ಹಾಕಿದ್ದಾರೆ. ಘಟನೆಗೆ ಪರಿಹಾರ ನೀಡಬೇಕೆಂದು ಸ್ಥಳೀಯರು ಮನವಿ ಸಲ್ಲಿಸಿದ್ದು ಅಧಿಕಾರಿಗಳು ಮನವಿಗೆ ಸ್ಪಂದಿಸಿದ್ದಾರೆ. ಜೊತೆಗೆ ಇಂತಹ ಘಟನೆಗಳು ಆಗದಂತೆ ಎಚ್ಚರ ವಹಿಸಲು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *