
ಡಿ 15 ರಂದು ಬೆಂಗಳೂರಿನ ಕ ಸಾ ಪ.ಶ್ರೀಕೃಷ್ಣರಾಜ ಪರಿಷತ್ ಮಂದಿರದಲ್ಲಿ 6 ಖ್ಯಾತ ಬರಹಗಾರರ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಜೋಗಿ, ನಾಡಿನ ಪ್ರಸಿದ್ಧ ಕವಿಗಳಾದ ಬಿ ಆರ್ ಲಕ್ಷ್ಮಣ್ ರಾವ್ ಇನ್ನು ಹಲವಾರು ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಬಿಡುಗಡೆಯಗಲಿರುವ ಕೃತಿಗಳು ಕೆ ಸತ್ಯನಾರಾಯಣ ರವರ “ಅಂಪೈರ್ ಮೇಡಂ “ನರೇಂದ್ರ ಪೈ ಅವರ “ಕಾವ್ಯ ಸಂಭವ ” ಡಾ ಲಕ್ಷ್ಮಣ ವಿ ಎ ರವರ “ಕವಲುಗುಡ್ಡ”ಬಾಳ ಸಾಹೇಬ್ ಲೋಕಾಪುರರವರ “ದೇಹಿ ” ಡಿ ಎಸ್ ಚೌಗಲೆರವರ “ವಾರಸಾ” ಮತ್ತು ನರೇಂದ್ರ ಪೈ ದೇರ್ಲ ರವರ “ಹಸಿರು ಆದ್ಯಾತ್ಮ ” ಬಿಡುಗಡೆಗೊಳ್ಳಲಿದೆ. ಪುಸ್ತಕ ಪ್ರಕಟಣೆ ಮತ್ತು ಮಾರಾಟದಲ್ಲಿ ಜನಪ್ರಿಯವಾಗಿರುವ ‘ಕ್ರಿಯೇಟಿವ್ ಪುಸ್ತಕ ಮನೆ ‘ತನ್ನ ಮೊದಲ ವರ್ಷದ ಪುಸ್ತಕ ಪ್ರಶಸ್ತಿಯಾದ “ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ “ಯನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಪ್ರಸಿದ್ಧ ಬರಹಗಾರರು ಹಾಗೂ ಖ್ಯಾತ ಪತ್ರಕರ್ತರು ಆಗಿರುವ ಪದ್ಮರಾಜ ದಂಡಾವತಿ ಯವರ “ಉಳಿದಾವ ನೆನಪು ” ಕೃತಿಗೆ ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ – 2024ನ್ನು ನೀಡಲಿದೆ. ಪ್ರಶಸ್ತಿಯು 5000 ನಗದು, ಪ್ರಮಾಣ ಪತ್ರಗಳನ್ನು ಒಳಗೊಂಡಿದೆ. ರಾಜ್ಯದ ಹಲವು ಸಾಹಿತಿಗಳನ್ನೋಳಗೊಂಡ ಆಯ್ಕೆ ಸಮಿತಿ ಪ್ರಶಸ್ತಿಗಾಗಿ ಒಟ್ಟು 78 ಕೃತಿಗಳಲ್ಲಿ 10 ಕೃತಿಗಳನ್ನು ಅಂತಿಮ ಸುತ್ತಿನಲ್ಲಿ ಪರಿಗಣಿಸಿದ್ದು ಅವಗಳಲ್ಲಿ “ಉಳಿದಾವ ನೆನಪು ” ಪ್ರಶಸ್ತಿಗೆ ಆಯ್ಕೆಯಾಗಿದೆ.

ಈ ಕಾರ್ಯಕ್ರಮಕ್ಕೆ ಸಾಹಿತ್ಯಾಭಿಮಾನಿಗಳು, ಪುಸ್ತಕ ಪ್ರಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೆ ಕಾರಣರಾಗಬೇಕೆಂದು ಸತ್ಯಶೋಧ ನ್ಯೂಸ್ ಮಾಧ್ಯಮದ ಮೂಲಕ ಕೋರಿದೆ.

