
ಪ್ರೇಮ್ ಯಡೂರು ಗೆಳೆಯರ ಸಾರಥ್ಯದೊಂದಿಗೆ ಪುಸ್ತಕ ವಿತರಣೆ

ಶಿವಮೊಗ್ಗ : 110 ವರ್ಷ ಪೂರೈಸಿ ಮುನ್ನುಗುತ್ತಿರುವ 110 ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಯಡೂರು ಸುಳುಗೋಡಿನ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಪೀಣ್ಯ ಎಕ್ಸ್‌ಪ್ರೆಸ್ ಖ್ಯಾತಿಯ ದಿಗ್ಗಜ ಬೌಲರ್ ಅಭಿಮನ್ಯು ಮಿಥುನ್ ಧನಸಹಾಯ ಮಾಡಿದ್ದಾರೆ.

ಇವರ ಸಹಕಾರವನ್ನು ಸ್ನೇಹಿತರಾದ ಪ್ರೇಮ್ ಯಡೂರು ಗೆಳೆಯರ ಸಾರಥ್ಯದಲ್ಲಿ ಪುಸ್ತಕ ವಿತರಣೆ ಮಾಡಿ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಇದಕ್ಕೆ ಸಹಕಾರ ನೀಡಿದ ನಿತಿನ್ ಶಾಂತವೇರಿ, ಚಿದಾನಂದ ಯಡೂರು ರವರಿಗೆ ಧನ್ಯವಾದ ತಿಳಿಸಲಾಯಿತು,

ಜೊತೆಗೆ ಈ ಸಂದರ್ಭದಲ್ಲಿ ದಿನೇಶ್ ಆಟೋ, ಅರುಣ್ ಮೊಗವೀರ, ದಿನೇಶ್ ಗೌಟಾಣಿ, ರಫೀಕ್, ಆದರ್ಶ, ವಿಷ್ಣು ಡ್ಯಾಮ್, ಹಾಗೂ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಅನಿತಾ ಸಂಜಯ್,ಮುಖ್ಯೋಪಾಧ್ಯಾಯರಾದ ಶ್ರೀಲತ ಮತ್ತು ಶಿಕ್ಷಕವೃಂದ ಉಪಸ್ಥಿತರಿದ್ದು ಮಕ್ಕಳಿಗೆ ಶುಭಹಾರೈಸಿದರು.