- ಗೀತಕ್ಕರನ್ನು ಗೆಲ್ಲಿಸಲು ಹಳ್ಳಿಯಲ್ಲಿ ಮತ ಬೇಟೆ

ಶಿವಮೊಗ್ಗ : ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಚುನಾವಣೆ ಇನ್ನು 5 ದಿನ ಮಾತ್ರ ಬಾಕಿ ಉಳಿದಿವೆ.

ಇತ್ತ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹಾಗೂ ನಟ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಸಂಚರಿಸಿ ಮತಯಾಚಿಸಿದ್ದಾರೆ.
ಈ ವೇಳೆ ತೀರ್ಥಹಳ್ಳಿಯ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರು, ಹಿರಿಯ ಕಾಂಗ್ರೆಸ್ ಮುಖಂಡರಾದ ಡಿ ಲಕ್ಷ್ಮಣ್ ಆಗುಂಬೆ ಸುತ್ತ ಮುತ್ತಲಿನ ಭಾಗಗಳಾದ ಚಂಗಾರು, ನಾಲೂರು, ಪಡುವಳ್ಳಿ ಆಗುಂಬೆ, ಮೇಗರವಳ್ಳಿಯಲ್ಲಿ ಮನೆ ಮನೆ ಭೇಟಿ ಮಾಡಿ ಕಾಂಗ್ರೆಸ್ ಗ್ಯಾರೆಂಟಿ ಹಾಗೂ ಅದರ ಪ್ರಯೋಜನಗಳು ಜನತೆಗೆ ಮನದಟ್ಟು ಮಾಡುವುದರೊಂದಿಗೆ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಮತ ಯಾಚಿಸಿದರು ಈ ವೇಳೆ ಡಿ ಲಕ್ಷ್ಮಣ್ ಅವರೊಂದಿಗೆ ನಾಗರಾಜ,ಗಿರಿಯಪ್ಪ ಗೌಡರು, ರಾಮಸ್ವಾಮಿ ಜಾವಗಲ್ ಇದ್ದರು.


