Oplus_131072

ಅರಣ್ಯ ಅಧಿಕಾರಿಗಳೇ ದಯವಿಟ್ಟು ಗಮನಿಸಿ – ಅನುಹುತವಾದರೆ ಹೊಣೆ ಯಾರು?

ತೀರ್ಥಹಳ್ಳಿ :ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರೂರು ಬಗ್ಗೋಡಿಗೆ ಮಾರ್ಗ ಮದ್ಯೆ ಬೃಹತ್ ಹೆಬ್ಬಲಸಿನ ಮರ ಒಣಗಿ ನಿಂತಿದ್ದು ಯಾವ ಕ್ಷಣದಲ್ಲಾದರೂ ರಸ್ತೆಗೆ ಬಿದ್ದು ಅನಾಹುತ ಮಾಡಬಹುದು

ಜೊತೆಗೆ ಮೇಗರವಳ್ಳಿ ಸೇತುವೆ ಸಮೀಪ ಅಕೇಶಿಯ ಮರ ರಸ್ತೆಗೆ ಅಡ್ಡಲಾಗಿ ನಿಂತಿದ್ದು ಅದರ ಜೊತೆಗೆ ವಿದ್ಯುತ್ ಲೈನ್ ಕೂಡ ಹಾದುಹೋಗಿವೆ ತೆರವು ಮಾಡದಿದ್ದರೆ ಆಪತ್ತು ಕಟ್ಟಿಟ್ಟ ಬುತ್ತಿ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಅಸಮಾಧಾನದ ಕೂಗಾಗಿದೆ.

ಇನ್ನು ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ದೂರು ನೀಡಿದ್ದು ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ ಎಂಬುದು ಸ್ಥಳೀಯರ ಅಕ್ರೋಷಕ್ಕೆ ಕಾರಣವಾಗಿದೆ.

Oplus_131072

Leave a Reply

Your email address will not be published. Required fields are marked *