- ಗಜಪಡೆ x ಅಕೌಂಟ್ ನಿಂದ ಅಪಮಾನ

ಟ್ವೀಟ್ ಮಾಡುವಾಗ Gajapade-ಗಜಪಡೆ (@GAJAPADE6) ಎಂದು ಇತ್ತು. ಈ ಟ್ವೀಟ್ ವೈರಲ್ ಆದ ಬಳಿಕ ಖಾತೆಯನ್ನು ಪ್ರೈವೆಟ್ ಮಾಡಿದ್ದೂ ಅಲ್ಲದೆ, ‘ಸುದೀಪ್ ಅಭಿಮಾನಿ’ ಎಂದು ಬದಲಾಯಿಸಲಾಗಿದೆ. ಈ ಬಗ್ಗೆಯೂ ದೂರಿನಲ್ಲಿ ಯಲ್ಲೇಖಿಸಲಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಅವರು ಇತ್ತೀಚೆಗೆ ಆರ್ಸಿಬಿ ಅನ್ಬಾಕ್ಸಿಂಗ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.ಆ ಬಳಿಕ ನಡೆದ ಪಂದ್ಯಗಳಲ್ಲಿ ಆರ್ಸಿಬಿ ಸೋಲು ಕಾಣುತ್ತಿದೆ. ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಬೆಂಗಳೂರು ತಂಡ ಸೋತಿದೆ. ಇದಕ್ಕೆ ಕೆಲವರು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಬಗ್ಗೆ ತುಚ್ಚ ಮಾತುಗಳನ್ನಾಡಿದ ಪೋಸ್ಟ್ ವೈರಲ್ ಆಗಿದ್ದು ಇದೀಗ ಪುನೀತ್ ಅಭಿಮಾನಿಗಳು ನಟ ದರ್ಶನ್ ಹಾಗೂ ಕನ್ನಡ ಚಿತ್ರರಂಗ ಕಿಡಿಗೇಡಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



