- ಹೆಸರಾಂತ ಕವಿ ಗಣಪತಿ ಹೆಗಡೆ ದಾಂಡೇಲಿ ನೇತೃತ್ವ
- ಪುಸ್ತಕ ಬಿಡುಗಡೆ, ಕವಿಗೋಷ್ಠಿ,ಸಾಧಕರಿಗೆ ಸನ್ಮಾನ

ಧಾರವಾಡ : ನಗರದ ರಂಗಾಯಣದಲ್ಲಿ ಮಾರ್ಚ್ 31ರಂದು ನೆನಪಿನ ನಾವಿಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ದಾಂಡೇಲಿ ಇದರ 2ನೇ ವಾರ್ಷಿಕೋತ್ಸವದ ಅಂಗವಾಗಿ ಸಾಹಿತ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿದೆ ನಡೆಯಿತು.

ಕಾರ್ಯಕ್ರಮದಲ್ಲಿ ಕುಮಾರಿ ಪ್ರಿಶಾ ಗಿರೀಶ್ ಬೆಂಗಳೂರು ಪ್ರಾರ್ಥನೆಯೊಂದಿಗೆ ಶುರುವಾಗಿದ್ದು,ನೆನಪಿನ ನಾವಿಕ ಬಳಗದ ರೂವಾರಿ ಗಣಪತಿ ಹೆಗಡೆಯವರ ಆಸರೆ ಕಾದಂಬರಿ ಜೊತೆಗೆ ನಾಡಿನ ಹೆಮ್ಮೆಯ ಕವಿ ಮುದಲ್ ವಿಜಯ್ ಇವರ ಒಡಲದನಿಗೆ ಧಣಿವಿಲ್ಲ ಕವನ ಸಂಕಲನ ಹಾಗೂ ಜನಪ್ರಿಯ ಕವಿಗಳಾದ ಎ.ಎನ್ ರಮೇಶ್ ಕೈಗಾ ಗುಬ್ಬಿ ಇವರ ಆತ್ಮಾನುಸಂಧಾನ ಕವನ ಸಂಕಲನ ಲೋಕಾರ್ಪಣೆಗೂಂಡವು.

ಸಮಾರಂಭದ ಸರ್ವಾಧ್ಯಕ್ಷರಾದ ಡಾ ಮಲರ್ ವಿಳಿ ಇವರು ವಹಿಸಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿಗಳಾದ ಡಾ ಸಿದ್ದರಾಮ ಹೊನ್ಕಲ್ ನಡೆಸಿಕೊಟ್ಟರು. ಪ್ರಸಿದ್ಧ ಲೇಖಕರು ಹಾಗೂ ವಿಮರ್ಶಕರಾದ ಡಾ ಶಿವರಾಜ್ ಬ್ಯಾಡರಹಳ್ಳಿ ಹಾಗೂ ಸಾಹಿತಿಗಳಾದ ಚಂದ್ರಶೇಖರ ಪೂಜಾರ (ಚಂಪೂ)ರವರು ಪುಸ್ತಕ ಪರಿಚಯಿಸುವುದರ ಜೊತೆಗೆ ಇಂದಿನ ಯುವ ಕವಿಗಳ ತಪ್ಪುಗಳು, ಪುಸ್ತಕ ಓದು, ತಾವು ಬರೆದಿರುವ ಕಾವ್ಯಗಳನ್ನು ತಾವೇ ವಿಮರ್ಶೆ ಮಾಡುವ ಬಗ್ಗೆ ಜೊತೆಗೆ ಕಾವ್ಯ ರಚಿಸಲು ಬೇಕಾದ ಮೂಲಭೂತ ಮಾಹಿತಿಗಳನ್ನು ಯುವ ಕವಿಗಳ ಮನ ಮುಟ್ಟುವಂತೆ ತಿಳಿ ಹೇಳಿದರು.ಪೀರಸಾಬ್ ನದಾಫ್ ರ ಅಚ್ಚುಕಟ್ಟು ಭಾವ ಲಹರಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.


ಇದೇ ಸಂದರ್ಭದಲ್ಲಿ ಮುರುಳಿವ್ಯಾಸ್ ಶಿವಮೊಗ್ಗ ಇವರ ವೀಕ್ಷಕ ವಿವರಣೆಯನ್ನು ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ನೀಡಿದ್ದು, ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆಯ ಅಭಿಮಾನ ತೋರಿದ್ದು ವಿಶೇಷವಾಗಿತ್ತು.ಜೊತೆಗೆ ಸು 20ಜನ ಸಾಧಕರಿಗೆ ಸನ್ಮಾನ ಕಾರ್ಯಕ್ರಮವಿತ್ತು.

ಈ ವೇಳೆ ಕಾರ್ಯಕ್ರಮದಲ್ಲಿ ಅರುಣ್ ಮಂಜುನಾಥ್ ತೀರ್ಥಹಳ್ಳಿ , ಆನಂದ ಹಕ್ಕೆನ್ನವರ್, ರಾಘವೇಂದ್ರ ಕೋಲಕಾರ,ಕಾಳನಾಯಕ ವಿ,ಸಚಿನ್ ಒಡೆಯರ್, ಶ್ರೀ ಶೈಲ ಮಾದಣ್ಣನವರ್, ಸೂರ್ಯಸಖ ಪ್ರಸಾದ್,ಗಿರೀಶ್ ಬೆಂಗಳೂರು ಪ್ರವೀಣ್ ಕುಮಾರ್ ಕನ್ಯಾಳ ಜೊತೆಗೆ ಸಾಹಿತ್ಯ ಪ್ರೇಮಿಗಳು,ಯುವ ಕವಿಗಳು ಇದ್ದರು.ಮೈತ್ರಾದೇವಿ ಹಿರೇಮಠ್ ಇವರ ನಿರೂಪಣೆಯಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿ ಬಂದಿತು.


