- ಮಾದರಿ ಶಾಲೆಗೆ ಶ್ರೀಮಂಜುನಾಥನ ಅಭಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಹೊನ್ನೆತಾಳು ಶಾಲೆಗೆ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮ ವಿಭಾಗದಲ್ಲಿ ಕರ್ನಾಟಕ ರಾಜ್ಯದ ವಿವಿದೆಡೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನದಲ್ಲಿ ಶಿಕ್ಷಕರ ಕೊರತೆ, ಶಾಲಾ ಕಟ್ಟಡ ರಚನೆ, ಆವರಣ ರಚನೆ , ಆಟದ ಮೈದಾನ,ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಕ್ರೀಡಾ ಹಾಗೂ ಭೋದನ ಸಾಮಗ್ರಿ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು,ಹಿಂದಿನ ವರ್ಷದಲ್ಲಿ ಒಟ್ಟಾರೆಯಾಗಿ 49.83 ಕೋಟಿ ಅನುಧಾನ ನೀಡಲಾಗಿದೆ. ಇದೇ ವೇಳೆ ಪ್ರಸ್ತುತ ಸಾಲಿನಲ್ಲಿ ತೀರ್ಥಹಳ್ಳಿ ತಾಲೂಕಿನ ಮಾದರಿ ಶಾಲೆಗಳಲ್ಲಿ ಒಂದಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು ಶಾಲೆಗೆ ಸಮುದಾಯ ಅಭಿವೃದ್ದಿ ಕಾರ್ಯಕ್ರಮದಡಿಯಲ್ಲಿ ಶಾಲಾ ಹೊಸ ಕಟ್ಟಡ ರಚನೆಗಾಗಿ 01 ಲಕ್ಷ ರೂ. ಅನುದಾನವನ್ನು ಹಸ್ತಾಂತರ ಮಾಡಲಾಯಿತು.ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿವಮೊಗ್ಗ ಜಿಲ್ಲಾ ನಿರ್ದೇಶಕರಾದ ಮುರುಳಿಧರ್ ಶೆಟ್ಟಿ , ತಾಲೂಕು ಯೋಜನಾಧಿಕಾರಿ ಮಾಲತಿ ದಿನೇಶ್ , ಆಗುಂಬೆ ವಲಯ ಮೇಲ್ವಿಚಾರಕರಾದ ಅಶೋಕ್ , ಸೇವಾ ಪ್ರತಿನಿಧಿ ಸುಮನಾ, ಹಾಗೂ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು,ಶಿಕ್ಷಕ ವೃಂದ ಶಾಲಾಭಿವೃದ್ದಿ ಸಮಿತಿ,ಹೊನ್ನೇತಾಳು ಒಕ್ಕೂಟದ ಪದಾಧಿಕಾರಿಗಳು,ಪೋಷಕರು,ಮಕ್ಕಳು ಇದ್ದರು.

ಹೊನ್ನೇತಾಳು ಶಾಲೆಗೆ ಭೇಟಿ ನೀಡಿ ಸಂತಸವಾಗಿದೆ,ಗ್ರಾಮೀಣ ಭಾಗದಲ್ಲಿಯೂ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶದ ಮೂಲಕ ಅಭಿವೃದ್ಧಿ ಹೊಂದಿದ ಶಾಲೆಯ ಪಟ್ಟಿಯಲ್ಲಿದ್ದೀರಿ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ನಿಮಗೆ ಅಭಿನಂದನೆಗಳು.
- ಹೊನ್ನೇತಾಳು ಶಾಲೆಗೆ ಭೇಟಿ ನೀಡಿ ಸಂತಸವಾಗಿದೆ,ಗ್ರಾಮೀಣ ಭಾಗದಲ್ಲಿಯೂ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶದ ಮೂಲಕ ಅಭಿವೃದ್ಧಿ ಹೊಂದಿದ ಶಾಲೆಯ ಪಟ್ಟಿಯಲ್ಲಿದ್ದೀರಿ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ನಿಮಗೆ ಅಭಿನಂದನೆಗಳು.
- ಮುರುಳಿಧರ್ ಶೆಟ್ಟಿ
(ಶಿವಮೊಗ್ಗ ಜಿಲ್ಲಾ ನಿರ್ದೇಶಕರು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ರಿ )
ಈ ಶಾಲೆಯನ್ನು ನೋಡಿದ್ರೆ ಒಂದು ಸುಂದರ ದೇವಸ್ಥಾನ ನೋಡಿದ ಹಾಗೆ ಅನ್ಸತ್ತೆ ಈ ಮಕ್ಕಳಿಗೆ ಮುಂದಿನ ಭವಿಷ್ಯ ಕೂಡ ಉಜ್ವಲವಾಗಲಿ ಎಂದು ಹಾರೈಸುವೆ – ಮಾಲತಿ ದಿನೇಶ್ (ತೀರ್ಥಹಳ್ಳಿ ತಾಲ್ಲೂಕು ಯೋಜನಾಧಿಕಾರಿ)


