ನಿಶ್ಚಲ್ ಜಾದೂಗಾರ್ ಬಳಗದ ವತಿಯಿಂದ ಸತತ ೪ ನೇ ವರ್ಷ ಸು 100 ಜನ “ವೃದ್ದರಿಗೆ ಸ್ವೆಟರ್ ವಿತರಣೆ”ಕಾರ್ಯಕ್ರಾಮಹಾಗು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ರವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಎಸ್ ಎಂ ಕೃಷ್ಣ ರವರ ವ್ಯಕ್ತಿತ್ವ ಹಾಗು ಮಲೆನಾಡಿನ ನಂಟಿನ ಬಗ್ಗೆ ಕುರಿತು ಸಾಹಿತಿಗಳಾದ ಶಿವಾನಂದ ಕರ್ಕಿ ಮಾತನಾಡಿದರು.ಜನಸಂಪರ್ಕ ಕೇಂದ್ರ ಹಾಗೂ ನಿಶ್ಚಲ್ ಜಾದೂಗಾರ್ ಬಳಗದವತಿಯಿಂದ 4 ವರ್ಷಗಳಿಂದ ಈವರೆಗೂ ಸುಮಾರು 350 ಕ್ಕೂ ಅಧಿಕ ಸ್ವೆಟರ್ ಹಾಗು ಜರ್ಕೀನ್ ವಿತರಣೆ ಮಾಡಲಾಗಿದ್ದು ಈ ಸರಳ ಸಮಾರಂಭದಲ್ಲಿ ಮೇಲಿನ ಕುರುವಳ್ಳಿ ಗ್ರಾಂ ಪಂ ಅಧ್ಯಕ್ಷರಾದ ಬಂಡೆ ವೆಂಕಟೇಶ್, ಉಪಾದ್ಯಕ್ಷರಾದ ಅನಿತಾ ಪ್ರವೀಣ್, ಸದಸ್ಯರಾದ ಆನಂದ್ ಸಿ, ಸೇವಾದಳ ಜಿಲ್ಲಾ ಅಧಿಕಾರಿಗಳಾದ ಪ್ರಸನ್ನ ಕುಮಾರ್ ತಿರಳೇಬೈಲು, ಪ್ರಜಾವಾಣಿ ವರದಿಗಾರರಾದ ನಿರಂಜನ್ ವಿ ಪ್ರದೀಪ್ , ಬರಹಗಾರ, ಶಿಕ್ಷಕರು ಸುರೇಶ್ ಮಲ್ಲಿಗೆಮನೆ ಮಾತನಾಡಿದರು .ಪ್ರಮುಖರಾದ ಚಿತ್ರಕ್ಕಾ ಮುತ್ತುಗುಂಡಿ, ಶರತ್ ಕುಮಾರ್, ಶಶಿಕುಮಾರ್ ಎಂ ,ತಂಗವೇಲು ಕಾರ್ತಿಕ್ ,ಭರತ್ ಹೂಗಾರ್,ಆಟೊ ಬಸವರಾಜ್ ,ದೇವರಾಜ್ ಲೈನ್ ಮನೆ, ಶೇಷಾ ಮಾರ್ಕೆಟರ್ರ್ ನ ಎಂಡಿ ಅಭಿರಾಮ್ ,ಕಾರ್ರ್ಯದರ್ಶಿ ರೂಪಾ, ಆ್ಯಂಕರ್ ಕ್ರಿಯೇಷನ್ ನ ಶ್ರೀದೇವಿ ಆಚಾರ್ಯ , ಧರ್ಮಸ್ಥಳ ಸಂಘದ ಸೇವಾನಿರತ ಅಧಿಕಾರಿ ಪ್ರಮೀಳ,ಮೊದಲಾದವರು ಉಪಸ್ಥಿತರಿದ್ದರು. ಜನಸಂಪರ್ಕ ಕೇಂದ್ರ-೧ ಕಾರ್ಯದರ್ಶಿಯಾದ ರೂಪಾ ರವರು ಸರ್ವರನ್ನೂ ಸ್ವಾಗತಿಸಿದರು .



