
ಹೂವು, ಹಣ್ಣು, ಪಟಾಕಿಗೆ ಮುಗಿಬಿದ್ದ ಜನತೆ – ಹಬ್ಬಕ್ಕೆ ಮಳೆರಾಯನ ಅಡ್ಡಿ

ಸತ್ಯಶೋಧ ನ್ಯೂಸ್ :ಹಿಂದೂಗಳ ಪ್ರಮುಖ ಹಬ್ಬದಲ್ಲಿ ಈ ದೀಪಾವಳಿ ವಿಶೇಷ. ಬೆಳಕಿನ ಹಬ್ಬ ಬಂದರೆ ಅಂಧಕಾರ ತೊಲಗಿ ಬೆಳಕು ತುಂಬುತ್ತದೆ. ಮನೆ ಮನೆಗಳಲ್ಲಿ ದೀಪಗಳ ಸಾಲು ಮಿನುಗುತ್ತವೆ, ಆಕಾಶವನ್ನೇ ತಲುಪುವಂತೆ ಪಟಾಕಿಗಳ ಶಬ್ದ ಗಾಳಿಯಲ್ಲಿ ಹರಡುತ್ತದೆ. ಎಲ್ಲೆಡೆ ಹರ್ಷದ ನಗು, ಹೊಸ ಬಟ್ಟೆ, ಸಿಹಿತಿಂಡಿಗಳ ಭೋಜನ ಸದಾ ನಗುವಲ್ಲಿ ತುಂಬಿರುವುದು ವಿಶೇಷ.

ಇನ್ನು ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಪಟಾಕಿ ಖರೀದಿಯ ಭರಾಟೆ ಜೋರಾಗಿದ್ದು ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಬೆಳಕು ಮತ್ತು ಹೂವಿನಿಂದ ಅಲಂಕರಿಸಿದ್ದು. ಎಲ್ಲೆಡೆ ಜನರ ನಗು, ಉತ್ಸಾಹ ಮತ್ತು ಸಂಭ್ರಮ ಹರಡಿದೆ. ಮಕ್ಕಳು ಹೊಸ ಬಟ್ಟೆ ಧರಿಸಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ, ಹಿರಿಯರು ದೇವರ ಆರಾಧನೆ ಮಾಡಿ ಕುಟುಂಬದೊಂದಿಗೆ ಸಂತೋಷ ಹಂಚಿಕೊಳ್ಳುತ್ತಾರೆ.

ಸತ್ಯಶೋಧ ಕಳಕಳಿ : ಹಬ್ಬದ ದಿನ ಪಟಾಕಿ ಸಿಡಿಸುವುದು ಖುಷಿಯಾದರು ಪಟಾಕಿ ಹೊಡೆಯುವಾಗ ಕೊಂಚ ಎಚ್ಚರಿಕೆ ಹಾಗೂ ಚಿಕ್ಕ ಮಕ್ಕಳ ಬಗ್ಗೆ ಎಚ್ಚರಿಕೆ ಅಗತ್ಯ ವಹಿಸುವುದು ಅಗತ್ಯವಾಗಿದೆ.

ಇನ್ನು ಬೆಳಕಿನ ಹಬ್ಬಕ್ಕೆ ಮಳೆರಾಯನ ಅಡ್ಡಿಯಾಗಿದ್ದು ಹಬ್ಬ ಮಾಡದೆ ಜನರು ಮನಸ್ಸು ಭಾರವಾಗಿದೆ. ಹಬ್ಬದ ದಿನವಾದರೂ ಮಳೆ ಬರದಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ

