• ಈದ್ ಮಿಲಾದ್ ಹಬ್ಬದ ಶುಭಾಶಯಗಳು

ಭಾರತ ಸರ್ವಧರ್ಮಗಳ ಗೂಡು.ಸಮನ್ವಯತೆಯ ಬಿಡು.ಹಬ್ಬ ಹರಿದಿನಗಳಿಗೆ ವಿಶೇಷತೆಯ ಮೆರುಗು ನೀಡಿದ ಧಾರ್ಮಿಕತೆಯ ತವರು.ಒಬ್ಬರೊಬ್ಬರು ಬೆರೆಯುತ ಒಂದಾಗಿ ಬಾಳುವ ಸರ್ವ ಜನಾಂಗದ ಶಾಂತಿಯ ನೋಟ.ಪ್ರತಿ ಧರ್ಮಗಳು ಹಬ್ಬವನ್ನು ಅತ್ಯಂತ ಸಂತೋಷದಿಂದ ಪರಸ್ಪರ ಭಾಗಿಯಾಗುತ ತನ್ನೆಲ್ಲ ದುಗುಡಗಳನ್ನು ಮರೆಯುತ ಚಿಂತೆ,ನೋವುಗಳ ಸರಿಸುತ ಸಂಭ್ರಮಿಸುವರು.ಇಂತಹ ಹಬ್ಬಗಳಲ್ಲಿ ಮುಸ್ಲಿಂ ಧರ್ಮದವರು ಆಚರಿಸುವ ಪ್ರಮುಖ ಹಬ್ಬವೇ ಈದ್ ಮಿಲಾದ್ಯಾವುದೇ ಹಬ್ಬವನ್ನು ಆಚರಿಸಲು ಅದಕ್ಕೆ ಅದರದೆಯಾದ ಹಿನ್ನೆಲೆ ಇದೆ ಇರುತ್ತದೆ. ಹಾಗಾಗಿ ಈ ಹಬ್ಬಕ್ಕೂ ಮರೆಯಲಾಗದ ವ್ಯಕ್ತಿಯ ಆದರ್ಶ ಬದುಕಿ ಬಾಳಿದ ನೀತಿಯ ಸೂತ್ರಗಳು ಬೋಧನೆಗಳು ಪ್ರೇರಕವಾಗಿವೆ.ಅಂತಹ ಮಹಾನ ವ್ಯಕ್ತಿ ಬೇರಾರು ಅಲ್ಲ.ನುಡಿದಂತೆ ನಡೆದ ಮೌಲ್ಯಗಳ ಚೇತನ, ಆದರ್ಶಗಳ ಮೂಲಕ ಹೆಸರಾದವರು ಇಸ್ಲಾಂ ಧರ್ಮದ ಸಂಸ್ಥಾಪಕರು ಕುರಾನನ್ ಘೋಷಕರು ಮಾನವೀಯತೆಯ ಹರಿಕಾರರುಧರ್ಮ ನಿಷ್ಠರು ಭಾವೈಕ್ಯತೆಯ ಪರಿಪಾಲಕರಾಗಿರುವಪ್ರವಾದಿ ಮಹಮ್ಮದ್ ಪೈಗಂಬರರ ಇವರ ಜನ್ಮ ದಿನವನ್ನು ಈದ್ ಮಿಲಾದ್ ಹಬ್ಬವೆಂದು ಆಚರಿಸುವರು.ಈ ಹಬ್ಬ ನಾಡಿನಲ್ಲಿ ಸ್ನೇಹ ಸೌಹಾರ್ದತೆಗೆ ಸ್ಫೂರ್ತಿಯಾಗಲಿ ಪೈಗಂಬರ್ ರ ಬೋಧನೆಗಳು ಬದುಕಿಗೆ ದಾರಿದೀಪವಾಗಲಿ.ಅವಿನಾಶ ಸೆರೆಮನಿಉಪನ್ಯಾಸಕರು

Leave a Reply

Your email address will not be published. Required fields are marked *