Oplus_131072

ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ಮೂರು ದಿನಗಳ ಎಳ್ಳಮಾವಾಸ್ಯೆ ಜಾತ್ರೆ ಆರಂಭವಾಗಿದ್ದು ಇದರ ಅಂಗವಾಗಿ ಡಿ 30 ರಂದು ತುಂಗಾನದಿಯಲ್ಲಿರುವ ಪರಶುರಾಮ ಕೊಂಡದಲ್ಲಿ ಸಾವಿರಾರು ಭಕ್ತರು ತೀರ್ಥ ಸ್ನಾನ ಮಾಡಿ ಪುನೀತರಾದರು.ಮುಂಜಾನೆ ಶ್ರೀ ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವ ನದಿ ದಡಕ್ಕೆ ಆಗಮಿಸಿ ಕೊಂಡಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ನದಿಯಲ್ಲಿ ಸ್ನಾನಮಾಡಿ ದೇವರ ದರ್ಶನ ಪಡೆದರು.ಈ ವೇಳೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ಬೇರೆ ಬೇರೆ ಊರು,

ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು,ಈ ವೇಳೆ ತಹಶೀಲ್ದಾರ್ ರಂಜಿತ್ ಎಸ್ ಹಾಗೂ ರಾಘವೇಂದ್ರ ಸೊಪ್ಪುಗುಡ್ಡೆ ಸೇರಿದಂತೆ ದೇವಸ್ಥಾನದ ಪ್ರಮುಖರು ಹಾಜರಿದ್ದರು. ಇನ್ನು ತೀರ್ಥಹಳ್ಳಿ ತುಂಗನದಿ ನೀರಿನ ಮಟ್ಟ ಹೆಚ್ಚಿರುವುದರಿಂದ ಸುರಕ್ಷತೆಯ ಹಿನ್ನಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.ವಾಹನಗಳು ರಥಬೀದಿಯಲ್ಲಿ ಸಂಚಾರ ಮಾಡಲು ನಿಷೇದ ಹೇರಲಾಗಿದೆ. ಸಾರ್ವಜನಿಕರು ಪೊಲೀಸ್ ಜೊತೆಗೆ ಸಹಕರಿಸಲು ಡಿ ವೈ ಎಸ್ ಪಿ ಗಜಾನನ ವಾಮನ ಸುತಾರ್ ಸತ್ಯಶೋಧ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

ತೀರ್ಥ ಸ್ನಾನದ ಮಹತ್ವವೇನು?

ಪರಶುರಾಮ ತಂದೆಯ ಆದೇಶದಂತೆ ತಾಯಿ ರೇಣುಕಾದೇವಿಯ ಶಿರಚ್ಛೇದನ ಮಾಡುತ್ತಾನೆ. ಆನಂತರ ಮಾತೃಹತ್ಯಾದೋಷದಿಂದ ತನ್ನ ಮುಕ್ತಿಹೇಗೆಂದು ತಂದೆಯನ್ನೇ ಕೇಳುತ್ತಾನೆ. “ನೀನು ಕೊಡಲಿಯನ್ನು ಎಲ್ಲಾ ನದಿಗಳಲ್ಲಿಯೂ ಅದ್ದಿ ತೊಳೆಯತ್ತಾ ಹೋಗು. ನಿನ್ನ ಪರಶುವಿನಲ್ಲಿಅಂಟಿದ ರಕ್ತದ ಕಲೆ ಪೂರ್ತಿ ತೊಳೆಯುತ್ತದೋ ಅಲ್ಲಿಗೆ ದೋಷ ಕಳೆದಂತೆ. ಆ ನೀರು ಪವಿತ್ರ ತೀರ್ಥವಾಗುತ್ತದೆ’ ಎಂದು ಜಮದಗ್ನಿ ಹೇಳುತ್ತಾನೆ.

ತಂದೆಯ ಮಾತಿನಂತೆ ಪರಶುರಾಮ ಸಂಚಾರ ಹೊರಟು ಎಲ್ಲಾ ನದಿ, ತೀರ್ಥಗಳಲ್ಲೂ ತನ್ನ ಪರಶುವನ್ನು ತೊಳೆದರೂ ಅದರಲ್ಲಿ ಅಡಗಿದ್ದ ಎಳ್ಳುಕಾಳಿನಷ್ಟು ರಕ್ತದ ಕಲೆ ಹಾಗೆಯೇ ಉಳಿಯಿತಂತೆ.ಕೊನೆಗೆ ತುಂಗೆಯ ಈ ಪ್ರದೇಶದಲ್ಲಿ ಕೊಡಲಿಯನ್ನು ತೊಳೆದಾಗ ಅದರಲ್ಲಿದ್ದ ಎಳ್ಳಿನ ಕಾಳಿನಷ್ಟು ಗಾತ್ರದ ಕಲೆ ಮಾಯವಾಯಿತಂತೆ.

ಅದು ಮಾರ್ಗಶಿರ ಬಹುಳ ಅಮಾವಾಸ್ಯೆ.ಪರಶುರಾಮನ ಮಾತೃಹತ್ಯಾದೋಷವನ್ನುಪರಿಹಾರ ಮಾಡಿದ ಈ ಮಡುವಿನಲ್ಲಿ ಸರ್ವಶಕ್ತಿಯೂ ಪ್ರವಹಿಸುತ್ತದೆ.ಜನರ ಪಾಪವನ್ನೆಲ್ಲಾ ತೊಳೆದು ಪುನೀತರನ್ನಾಗಿಸುತ್ತದೆ ಎಂಬ ಪ್ರತೀತಿಬೆಳೆಯಿತು. ಈ ಕಾರಣಕ್ಕಾಗಿ ಲಕ್ಷಾಂತರ ಜನರು ರಾಮಕೊಂಡದಲ್ಲಿ ಮುಳುಗಿ ತೀರ್ಥಸ್ನಾನ ಮಾಡಿ ಪಾವನರಾಗುತ್ತಾರೆ.

Oplus_131072

Leave a Reply

Your email address will not be published. Required fields are marked *