ಹೊಸೂರಿನ ಮುಕ್ತಿಧಾಮಕ್ಕೆ 1.51 ಲಕ್ಷ ವೆಚ್ಚದ ಸಿಲಿಕಾನ್ ಛೇಂಬರ್ ವಿತರಣೆ

ತೀರ್ಥಹಳ್ಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ಸಮುದಾಯ ಅಭಿವೃದ್ದಿ ಕಾರ್ಯಕ್ರಮದ ಅಡಿಯಲ್ಲಿ ತೀರ್ಥಹಳ್ಳಿ ತಾಲೂಕಿನ ಆಗುಂಬೆ ವಲಯದ ಹೊಸೂರುನಲ್ಲಿರುವ ಮುಕ್ತಿಧಾಮಕ್ಕೆ ರೂ 1.51 ಲಕ್ಷ ವೆಚ್ಚದ ಸಿಲಿಕಾನ್ ಛೇಂಬರ್ ಅನ್ನು ಯೋಜನಾಧಿಕಾರಿ ಮಮತ ಶೆಟ್ಟಿ ರವರು ವಿತರಿಸಿದರು .

ನಂತರ ಮಾತಾನಾಡಿದ ಅವರು ಶವ ಸಂಸ್ಕಾರ ಭಾರತೀಯ ಹಿಂದೂ ಪರಂಪರೆಯಲ್ಲಿ ವ್ಯಕ್ತಿ ಮರಣ ನಂತರ ಮೃತ ದೇಹವನ್ನು ಗೌರವದಿಂದ ಬೀಳ್ಕೊಡುವ ಆಚರಣೆಯಾಗಿದ್ದು, ಶವ ಸುಡುವುದು ನಂತರ ನಡೆಯುವ ಸಂಸ್ಕಾರಗಳನ್ನು ಗೌರವಪೂರ್ಣವಾಗಿ ಜರುಗಿಸಲು ಕ್ಷೇತ್ರದ ವತಿಯಿಂದ ಸಿಲಿಕಾನ್ ಚೇಂಬರ್ ಗಳನ್ನು ನೀಡುತ್ತಿದೆ ಇದು ನಮ್ಮ ರಾಜ್ಯದ 783 ನೇ ಸಿಲಿಕಾನ್ ಚೇಂಬರ್ ಆಗಿದೆ ಇಲ್ಲಿನ ಸಮಾಜದ ಪ್ರಮುಖರು ಹಾಗೂ ಮುಕ್ತಿದಾಮ ನಿರ್ವಹಣಾ ಸದಸ್ಯರು ಇದರ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಗದೀಶ ಹೊನ್ನೇತಾಳು ಸೊಸೈಟಿಯ ನಿರ್ದೇಶಕರಾದ ಗಿರೀಶ, ಸ್ಥಳೀಯರಾದ ಜಯ ಹೆಗಡೆ, ನೇಮಿರಾಜ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ವೇತ ಹೆಗಡೆ,ವಲಯದ ಮೇಲ್ವಿಚಾರಕರಾದ ಶ್ರೀನಿವಾಸ್,ಸೇವಾಪ್ರತಿನಿಧಿ ನೇತ್ರಾವತಿ ಯವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *