ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿನ ಶಿಕ್ಷಕರು ಹಾಗೂ ಸಿಬ್ಬಂದಿ ಗಳಿಗೆ ಫೇಸಿಯಲ್‌ ಹಾಜರಾತಿ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದ್ದು, ಒಂದೂವರೆ ತಿಂಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ಸುದ್ದಿಗಾರರ ಜತೆ ಮಾತನಾಡಿ, ಬೇರೆ ಬೇರೆ ರಾಜ್ಯದಲ್ಲಿ ಫೇಸಿಯಲ್‌ ಅಟೆಂಡೆನ್ಸ್‌ ಮಾಡುತ್ತಿದ್ದಾರೆ.

ಅದೊಂದರಲ್ಲಿ ನಾವು ಹಿಂದಿದ್ದೇವೆ. ಹಿಂದೆ ಇಂತಹ ಪ್ರಯತ್ನ ಏಕೆ ಮಾಡಲಿಲ್ಲ ಎಂಬುದು ಗೊತ್ತಿಲ್ಲ. ಈಗ ಅದೆಲ್ಲವನ್ನು ತಿದ್ದುಪಡಿ ಮಾಡಿ ಒಂದೂವರೆ ತಿಂಗಳಲ್ಲಿ ಇದನ್ನು ಜಾರಿಗೊಳಿಸುತ್ತೇವೆ. ಸರಕಾರಿ ಶಾಲೆಯಲ್ಲೇ 25 ಸಾವಿರ ಮಕ್ಕಳಿಗೆ ಸಿಇಟಿ, ನೀಟ್‌ ತರಬೇತಿ ಕೊಡುತ್ತಿದ್ದೇವೆ. ಯಾರು ಆಸಕ್ತಿ ತೋರಿಸುತ್ತಾರೋ ಎಲ್ಲರಿಗೂ ತರಬೇತಿ ಕೊಡಿ ಎಂದು ಹೇಳಿದ್ದೇನೆ. ಅದನ್ನೂ ಶೀಘ್ರ ಜಾರಿಗೊಳಿಸುತ್ತೇವೆ ಎಂದರು.

Oplus_131072

Leave a Reply

Your email address will not be published. Required fields are marked *