
ತೋಟಗಾರಿಕೆ ಇಲಾಖೆ ವತಿಯಿಂದ 2024-25 ನೇ ಸಾಲಿನಲ್ಲಿ ಮಂಗಾರು ಮತ್ತು ಹಿಂಗಾರು ಹಂಗಾಮುಗಳ ಮುರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಅನುಷ್ಟಾನಕ್ಕೆ ಯೋಜನೆವಾರು, ಬೆಳೆವಾರು ರೈತರ ವಿವರವನ್ನು ಆನ್ ಲೈನ್ ಪೊರ್ಟಲ್ (www.samrakshane.karnataka.gov.in) ನಲ್ಲಿ ಮಾತ್ರ ನೊಂದಾಯಿಸಲು ಆದೇಶಿಸಿದ್ದು, ಹವಾಮಾನ ಆಧಾರಿತ ಬೆಳೆಗಳಾದ ಮಾವು ಮತ್ತು ದ್ರಾಕ್ಷಿ ಬೆಳೆಯ ಬೆಳೆ ವಿಮೆ ನೊಂದಣಿಗಾಗಿ ಆರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.ಬೆಳೆ ವಿಮೆ ಪಡೆಯಲಿಚ್ಚಿಸುವ ರೈತರು ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ಸಂಖ್ಯೆ ನಕಲು ಪ್ರತಿ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ರಾಷ್ಟ್ರೀಯ ಬ್ಯಾಂಕ್, ಸಾಮಾನ್ಯ ಸೇವಾ ಕೆಂದ್ರ/ ಗ್ರಾಮ ಒನ್ ಗಳಲ್ಲಿ ವಿಮೆಗೆ ನೊಂದಾಯಿಸಕೊಳ್ಳಬಹುದು.ವಿಮಾ ಮೊತ್ತ ಪಾವತಿಸಲು ಜುಲೈ 31 ಕೊನೆಯ ದಿನವಾಗಿದೆ.

