- ಇದರಲ್ಲಿರುವ ವಿಷ 1000 ಸೈನೈಡ್ ಗೆ ಸಮವಂತೆ

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮುದ್ರದಲ್ಲಿ ಗುರುವಾರ ಮೀನುಗಾರರ ಬಲೆಗೆ ಅಪರೂಪದ ವಿಚಿತ್ರ ಮೀನು ಸಿಕ್ಕಿದೆ.ವಿಶಾಖಪಟ್ಟಣಂನ ಸಹಾಯಕ ಮೀನುಗಾರಿಕಾ ನಿರ್ದೇಶಕ ಡಾ. ಪಿ.ಶ್ರೀನಿವಾಸ್ ರಾವ್ ಮಾಹಿತಿ ನೀಡಿದ್ದು,ಇದು ಪಫ್ಫರ್ ಫಿಶ್ ಎಂದು ತಿಳಿಸಿದ್ದಾರೆ. ಪಫ್ಪರ್ ಫಿಶ್ ತುಂಬಾ ವಿಷಕಾರಿ ಮೀನು. ಇತರ ಸಮುದ್ರ ಪ್ರಭೇದಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು, ಈ ಮೀನಿನ ಯಕೃತ್ತಿನಲ್ಲಿ ಶಕ್ತಿಯುತವಾದ ವಿಷ ಉತ್ಪಾದನೆಯಾಗುತ್ತದೆ. ಈ ವಿಷವು ಸೈನೈಡ್ಗಿಂತ 1,000 ಪಟ್ಟು ಹೆಚ್ಚು ಮಾರಕವಾಗಿದೆ.
