

ತೀರ್ಥಹಳ್ಳಿ: ಬಿದರಗೋಡು ಸರ್ವೇ ನಂ 73ರಲ್ಲಿ ಸ್ಟೋನ್ ಕ್ರಷರ್ ( ಕಪ್ಪು ಕಲ್ಲು ಕ್ವಾರಿ ) ಶುರು ಮಾಡುವ ಹಿನ್ನಲೆಯಲ್ಲಿ ಗ್ರಾಮಸ್ಥರು ಕ್ರಷರ್ಗೆ ಅವಕಾಶ ನೀಡದಿರುವಂತೆ ಸಚಿವ ಈಶ್ವರ ಖಂಡ್ರೆರಿಗೆ ಪತ್ರ ಬರೆದಿದ್ದಾರೆ. ಒಟ್ಟು 239 ಎಕರೆ ಜಮೀನಿದ್ದು, ಇದರಲ್ಲಿ 100 ಎಕರೆ ಪರಿಭಾವಿತ ಅರಣ್ಯವಿದೆ. ಇದನ್ನು ಗುರುತಿಸದೇ ಈ ಭೂಮಿಯಲ್ಲಿ 17 ಎಕರೆಯನ್ನು ಕ್ರಷರ್ ಗೆ ನೀಡಲು ಕಂದಾಯ & ಅರಣ್ಯ ಇಲಾಖೆ ಅಧಿಕಾರಿಗಳೇ ಆಸಕ್ತರಾಗಿದ್ದಾರೆ ಎಂಬುದು ಗ್ರಾಮಸ್ಥರ ಆತಂಕ.

ಬಿದರಗೋಡು ಜನರು ಕಳೆದ ಹತ್ತು ವರ್ಷದಿಂದ ಅವಿರತ ಹೋರಾಟ ಮಾಡುತ್ತಾ ಬಂದಿದದ್ದು ಯಾವುದೇ ಪ್ರಯೋಜನವಾಗಲಿಲ್ಲ.ಬಿದರಗೋಡು ಗುಡ್ಡದಲ್ಲಿ ಅರಣ್ಯ ನಾಶ ಪ್ರಕರಣಗಳಿವೆ. ಸಮೀಪವೇ ಸೋಮೇಶ್ವರ ವೈಲ್ಡ್ ಲೈಫ್ ಪರಿಮಿತಿ ಇದೆ,ಆಗುಂಬೆ ನಿತ್ಯಹರಿದ್ವರ್ಣ ಕಾಡಿದೆ, ಪ್ರಾಣಿಗಳ ಓಡಾಟವಿದೆ.

ದಶಕದ ಹಿಂದೆಯೇ ನಿಂತಿದ್ದ ಕ್ವಾರಿ ಪುನಾರಂಭಕ್ಕೆ ಇಲ್ಲಿದ್ದ ಅಮೂಲ್ಯ ಮರಗಳನ್ನು ಬಿಟೇ, ಹಲಸು ಹಾಗೂ ಅನೇಕ ಔಷಧೀ ಸಸ್ಯಗಳನ್ನು ಲೂಟಿ ಮಾಡಿ, ಅರಣ್ಯ ಸ್ವರೂಪವನ್ನೇ ಬದಲಿಸಲಾಗಿದೆ.ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಕಾರ್ಯ ಮಾಡದೆ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಲಾಬಿ ನಡೆಯುತ್ತಿದೆ ಹಾಗೂ ಪಕ್ಷಾತೀತ ಲಾಭಿ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.ಈ ಸಂಬಂಧ ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರು ಗ್ರಾಮಸ್ಥರ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದು. ಸಂಬಂಧ ಪಟ್ಟ ಅಧಿಕಾರಿಗಳಿಗೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ.

