- ಸಾತ್ವಿಕ್ ಅರೋಗ್ಯ ಸ್ಥಿರ

ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆಬಾವಿಯೊಳಗೆ ಸಿಲುಕಿದ್ದ 14 ತಿಂಗಳ ಮಗು ಸಾತ್ವಿಕ್‌ನ ರಕ್ಷಿಸಿ ಇದೀಗ ಸಾತ್ವಿಕ್ ಅರೋಗ್ಯ ಚೇತರಿಕೆ ಕಂಡಿದೆ.ಇನ್ನು ಈ ಅವಘಡಕ್ಕೆ ಕಾರಣರಾದ ಸಾತ್ವಿಕ್ ಅಜ್ಜ ಶಂಕರಪ್ಪ ಮುಜಗೊಂಡ (60) ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಮುಂದಾಗಿದ್ದು,ಅನುಮತಿ ಪಡೆಯದೇ ಕೊಳವೆಬಾವಿ ಕೊರೆಸಿದ್ದು ಅಲ್ಲದೇ ಅದನ್ನು ಮುಚ್ಚದೇ ತೆರೆದು ಬಿಟ್ಟಿರುವ ಕಾರಣ ಮಗು ಬಿದ್ದು, ಅವಘಡ ಸಂಭವಿಸಿತು. ಹೀಗಾಗಿ ಹೊಲದ ಮಾಲೀಕ ಮತ್ತು ಕೊಳವೆಬಾವಿ ಕೊರೆದ ಕಂಪನಿ (ಏಜೆನ್ಸಿ) ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿರುವೆ’ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.ಮಗುವಿಗೆ ಸಿಟಿ ಸ್ಕ್ಯಾನ್ ಎಂಆರ್‌ಐ ಸ್ಕ್ಯಾನ್ ಮಾಡುವುದರ ಜೊತೆಗೆ ಕಿಡ್ನಿ ಲಿವರ್ ಬ್ರೈನ್ ಬೆನ್ನು ಹುರಿ ಸೇರಿ ಇಡೀ ದೇಹವನ್ನೇ ತಜ್ಞ ವೈದ್ಯರು ಪರೀಕ್ಷಿಸಿದ್ದಾರೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


