ಎಲೆ ಚುಕ್ಕೆ ರೋಗಕ್ಕೆ ಬೇಕಾದ ಶಿಲೀಂಧ್ರನಾಶಕಕ್ಕೆ ಸಹಾಯಧನ ಅರ್ಜಿ ಅಹ್ವಾನ – ದಾಖಲಾತಿ ಏನೇನು ಬೇಕು, ಯಾರಿಗೆಲ್ಲ ಅವಕಾಶ ಇದೇ :ಸುದ್ದಿ ಓದಿ

ತೀರ್ಥಹಳ್ಳಿ : 2025 -26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಡಿಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗ ನಿಯಂತ್ರಣಗೆ ಸಿಂಪಡಣೆ ಮಾಡಲು ವಿವಿಧ ಶಿಲೀಂದ್ರ ನಾಶಕಗಳನ್ನು ಖರೀದಿಸಿದ ತೀರ್ಥಹಳ್ಳಿ ತಾಲೂಕಿನ ಎಲ್ಲಾ ವರ್ಗದ ರೈತರಿಂದ ಅರ್ಜಿಯನ್ನು ಕರೆಯಲಾಗಿದೆ,

ಮಾರ್ಗಸೂಚಿಯಾನುಸಾರ ರೈತರು 1ಎಕರೆ ಗೆ ಕನಿಷ್ಠ 2000 ರೂ ಮೊತ್ತಕ್ಕೆ ಖರೀದಿಸಬಹುದಾಗಿದೆ. ಖರೀದಿ ವೆಚ್ಚಕ್ಕೆ ಶೇ 30ರಂತೆ ಪ್ರತಿ ಎಕರೆಗೆ ಗರಿಷ್ಠ 600ರೂ ಗಳ ಸಹಾಯಧನವನ್ನು ಹಾಗೂ ಪ್ರತಿ ಫಲಾನುಭವಿಯು ಗರಿಷ್ಠ ಐದು ಎಕರೆಯ ವರೆಗೆ ಕನಿಷ್ಠ 10 ಸಾವಿರ ರೂಗಳ ಮೊತ್ತಕ್ಕೆ ಸಿಲಿಂದ್ರ ನಾಶಕಗಳನ್ನು ಖರೀದಿಸಬಹುದಾಗಿದ್ದು ಶೇಕಡ 30ರಂತೆ 5 ಎಕರೆಗೆ ಗರಿಷ್ಠ 3000 ಗಳ ಸಹಾಯಧನವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ತೀರ್ಥಹಳ್ಳಿ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ದಿನಾಂಕ 12.09.2025 ಒಳಗೆ ಅರ್ಜಿಯನ್ನು ಸಲ್ಲಿಸಲು ಕೋರಿದೆ.

ಸಂಪರ್ಕಿಸಿ

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು

  • ಅರ್ಜಿ ಕಚೇರಿಯಲ್ಲಿ ಲಭ್ಯ
  • 01-04-25 ರ ನಂತರ ಶಿಲಿಂದ್ರನಾಶಕ ಖರೀದಿ ಮಾಡಿರುವ ಜಿ ಎಸ್ ಟಿ ಬಿಲ್ಲು ಹಾಗೂ ಸಹಿ ಕಡ್ಡಾಯ.
  • 01-04-25 ರ ನಂತರದ ಬಾಗಾಯ್ತು ಪಹಣ (ಬೆಳೆ ನಮೂದಾಗಿರ ದಿದ್ದರೆ ಗ್ರಾಮ ಆಡಳಿತ ಅಧಿಕಾರಿಗಳಿಂದ ಬೆಳೆ ದೃಡೀಕರಣ)
  • ಆಧಾರ್ ಜೆರಾಕ್ಸ್
  • ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
  • ಖಾತೆದಾರರು ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ, ವಂಶ ವೃಕ್ಷ ಹಾಗೂ 100ರೂ ಛಾಪಾ ಕಾಗದ ನೋಟರಿ ಮಾಡಿಸುವುದು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಪ್ರಮಾಣ ಪತ್ರ ನೀಡುವುದು

Leave a Reply

Your email address will not be published. Required fields are marked *