
ತೀರ್ಥಹಳ್ಳಿ : ಸೆ 11 ರ ಗುರುವಾರದಂದು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಹಳೇ ಕೆಸಲೂರು ಶಾಲೆಯಲ್ಲಿ ಆಗುಂಬೆ ಹೋಬಳಿ ಮಟ್ಟದ ಕ್ರೀಡಾಕೂಟ ನಡಿದಿದ್ದು ಈ ಕ್ರೀಡಾಕೂಟವು ಬಹಳ ಅದ್ದೂರಿಯಾಗಿ ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ನಡೆಯಿತು.


ಈ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿ ತಾಲೂಕಿನ ಮಾದರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹೊನ್ನೇತಾಳು ಶಾಲೆ ಐತಿಹಾಸಿಕ ಗೆಲುವು ಸಾದಿಸಿದ್ದು, ಹೋಬಳಿ ಮಟ್ಟದ ಬಾಲಕ ಬಾಲಕಿಯರ ಸಮಗ್ರ ಪ್ರಶಸ್ತಿ ಮೂಡಿಗೇರಿಸಿ ಕೊಂಡಿದೆ.

ಇನ್ನು ಮಕ್ಕಳ ಈ ಅದ್ವಿತೀಯ ಸಾಧನೆಗೆ ಹೊನ್ನೇತಾಳು ಶಾಲಾ ಎಸ್ ಡಿ ಎಂ ಸಿ ಬಳಗ, ಮುಖ್ಯ ಶಿಕ್ಷಕರು/ ಶಿಕ್ಷಕಿಯರು, ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.



