ಶಿವಮೊಗ್ಗ : ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಡಿ ಗ್ರೂಪ್ ನೌಕರರ ಪಾತ್ರ ಬಹಳಷ್ಟಿದೆ, ಆದರೆ ಡಿ ಗ್ರೂಪ್ ನೌಕರರ ಬಗ್ಗೆ ಸರ್ಕಾರದ ಮಲತಾಯಿ ದೋರಣೆ ಖಂಡಿಸಿ ಹೋರಾಟಕ್ಕಿಳಿಯುವ ಅನಿವಾರ್ಯತೆ ಎದುರಾಗಿದ್ದು ಈ ಬಗ್ಗೆ ಅಖಿಲ ಭಾರತ ಡಿ ಗ್ರೂಪ್ ನೌಕರರ ಕೇಂದ್ರ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ಎಚ್ ಎಸ್ ನಾಗೇಂದ್ರ ಹೆದ್ದೂರು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಇತ್ತೀಚೆಗೆ ನಡೆದ ಸನ್ಮಾನ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತಮಿಳುನಾಡಿನಲ್ಲಿ ಕೂಡ ಎಂತದ್ದೇ ಸಮಸ್ಯೆ ಎದುರಾಗಿದ್ದು, ನಮ್ಮ ಒಕ್ಕೂಟದ ವತಿಯಿಂದ ಹೋರಾಟ ಮಾಡಿದ್ದರ ಪ್ರತಿಫಲವಾಗಿ ಇದೀಗ 31 ಸಾವಿರ ಡಿ ಗ್ರೂಪ್ ಹುದ್ದೆ ಮಂಜೂರು ಮಾಡಲಾಗಿದೆ. ಈ ಪ್ರಯತ್ನ ನಮ್ಮ ರಾಜ್ಯದಲ್ಲಿ ಸೇರಿದಂತೆ ವಿವಿಧ ರಾಜ್ಯದಲ್ಲಿ ಕೂಡ ಆಗಬೇಕಿದೆ ಎಂದರು.ಕೇಂದ್ರ ಸರ್ಕಾರದ ನೌಕರರಂತೆ ಎಲ್ಲಾ ರಾಜ್ಯದಲ್ಲೂ ಡಿ ಗ್ರೂಪ್ ನೌಕರರಿಗೆ ಸಮಾನ ವೇತನ, ವೈದ್ಯಕೀಯ ಭತ್ಯೆ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡಬೇಕು

ಜೊತೆಗೆ ಸರ್ಕಾರಿ ಸಂಸ್ಥೆಗಳ ಗುತ್ತಿಗೆ ನೇಮಕಾತಿಯನ್ನು ರದ್ದು ಗೊಳಿಸಿ ಸರ್ಕಾರವೇ ನೇರವಾಗಿ ಡಿ ಗ್ರೂಪ್ ನೌಕರರನ್ನೂ ನೇಮಕಾತಿ ಮಾಡಬೇಕು, ಅಲ್ಲದೆ ಗ್ರಾಂ ಪಂ, ಪ ಪಂ, ಪುರಸಭೆಗಳಲ್ಲಿ ಕೆಲಸ ಮಾಡುವ ಗುತ್ತಿಗೆ ಆಧಾರಿತ ನೌಕರರನ್ನು ಕೊಡ ಖಾಯಂ ಗೊಳಿಸಿ ಸರ್ಕಾರಿ ನೌಕರರೆಂದು ಘೋಷಿಸಿ ಅವರ ವಿದ್ಯಾರ್ಹತೆಗೆ ತಕ್ಕಂತೆ ಬಡ್ತಿ ನೀಡಬೇಕು. ರಾತ್ರಿ ಕಾವಲುಗಾರರು, ಕ್ಲಿನರ್, ಹುದ್ದೆಗಳಿಗೆ ಡಿ ವರ್ಗದ ನೌಕರರನ್ನೂ ಬರ್ತೀ ಮಾಡುವಂತೆ ಅಗ್ರಹಿಸಿದರು.ಜೊತೆಗೆ ಕಂದಾಯ ಇಲಾಖೆ, ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗುತ್ತಿಗೆ ಆಧಾರಿತ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕಿಯರು, ಹಾಗೂ ಗ್ರಾಮ ಸಹಾಯಕರನ್ನೂ ಕೂಡ ನಾಲ್ಕು ದಶಕಗಳ ಕಾಲ ಸೇವೆಯ ನಂತರ ಡಿ ಗ್ರೂಪ್ ಗೆ ಸೇರಿಸದೆ ನಿರ್ಲಕ್ಷ ವಹಿಸಿದ್ದು ಅವರನ್ನು ಖಾಯಂ ಗೊಳಿಸುವಂತೆ ಒತ್ತಾಯಿಸಲಾಯಿತು.

ಇದೇ ವೇಳೆ ತಮಿಳುನಾಡಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯ ಜವಾಬ್ದಾರಿ ಯನ್ನು ರಾಷ್ಟ್ರೀಯ ಅಧ್ಯಕ್ಷರು ನನಗೆ ವಹಿಸಿದ್ದು ಈ ಹೋರಾಟದಲ್ಲಿ ನಿರತನಾಗಿದ್ದೇನೆ. ಜೊತೆಗೆ ಇದೇ ಅಕ್ಟೋಬರ್ 12 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನ ಆಯೋಜನೆ ಮಾಡಲು ನಿರ್ಧಾರ ಮಾಡಿದ್ದೇವೆ, ಈ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿರಲಿದ್ದಾರೆ. ನೀವು ಈ ಸಮ್ಮೇಳನದಲ್ಲಿ ಭಾಗವಹಿಸಿ ನಾವೆಲ್ಲರೂ ಒಟ್ಟಿಗೆ ಹೋರಾಡೋಣ ಎಂದು ಕರೆ ನೀಡಿದರು.ಈ ವೇಳೆ ಅಖಿಲ ಭಾರತ ಡಿ ಗ್ರೂಪ್ ನೌಕರರ ಕೇಂದ್ರ ಒಕ್ಕೂಟದ ರಾಷ್ಟ್ರದ ಅಧ್ಯಕ್ಷ ಗಣೇಶನ್, ಉಪಾಧ್ಯಕ್ಷ ಆಂಧ್ರ ಪ್ರದೇಶದ ವೆಂಕಟೇಶವಾರು, ತಮಿಳುನಾಡಿನ ಎಸ್ ಮುತ್ತುರಾಮ್, ಪಿ ಮುನಿಯಪ್ಪನ್, ಬಿ ಎಂ ನಟರಾಜ್, ಸರೋಜಮ್ಮ ಇದ್ದರು.ಗ್ರಾಮ ಸಹಾಯಕರು ಸು 40 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ಇಲ್ಲಿಯವರೆಗೂ ಯಾವುದೇ ಸೇವಾ ಭದ್ರತೆ ಡಿ ಗ್ರೂಪ್ ಸರ್ಕಾರದಿಂದ ಯಾವುದೇ ಸೌಲತ್ತುಗಳಿಲ್ಲದೆ ಕೆಲಸವನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ.ಅಂತವರ ಪರ ದನಿ ಎತ್ತಿದ ಅಖಿಲ ಭಾರತ ಡಿ ಗ್ರೂಪ್ ನೌಕರರ ಕೇಂದ್ರ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ಎಚ್ ಎಸ್ ನಾಗೇಂದ್ರ ಇವರಿಗೆ ತೀರ್ಥಹಳ್ಳಿಯ ಡಿ ಗ್ರೂಪ್ ನೌಕರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *