Oplus_131072

ತೀರ್ಥಹಳ್ಳಿ : ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ವೀರೇಶ್ ಟಿ ಅವರ ಮಾರ್ಗದರ್ಶನ ಹಾಗೂ ಎಲ್ಲಾ ಶಿಕ್ಷಕರ ಸಹಕಾರದಲ್ಲಿ ಗೆದ್ದ , ಕು// ಅಶ್ವಿನಿ ಪ್ರಭುಗೌಡರ್ ತುಂಬಿಗಿ ಹಾಗೂ ನಮ್ರತಾ ಮೋಹನ್ ನಂಟೂರು..

ಇಂದು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿ ಹಾಗೂ ತಾಲೂಕು ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ನಡೆದ ತಾಲೂಕು ‌ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಪ್ರಥಮ ಸ್ಥಾನ ಪಡದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಕಳೆದ ವರ್ಷ ಇದೇ ಸ್ಪರ್ಧೆಯಲ್ಲಿ ಇದೇ ಶಾಲೆಯ ಅಕ್ಷತಾ ಹೆಚ್ ಯು ಮತ್ತು ಶ್ರೀರಕ್ಷಾ ಕರ್ನಾಟಕ ರಾಜ್ಯ ಮಟ್ಟದಲ್ಲಿ ರನ್ನರ್ ಆಪ್ ಪ್ರಶಸ್ತಿ ಪಡೆದು ಜಿಲ್ಲೆಗೆ ತಾಲೂಕಿಗೆ ಕೀರ್ತಿ ತಂದಿದ್ದು ಸ್ಮರಿಸಬಹುದು.

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಭಾಗವಹಿಸದ್ದ ಈ ಸ್ಪರ್ಧೆಯಲ್ಲಿ ಗುಡ್ಡೇಕೇರಿ ಶಾಲಾ ಮಕ್ಕಳು ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು, ಮೌಖಿಕ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು.ಅಂತಿಮ ಸುತ್ತಿನಲ್ಲಿ, ಸಹ್ಯಾದ್ರಿ ಪ್ರೌಢಶಾಲೆ, ವಾಗ್ದೇವಿ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಮೇಗರವಳ್ಳಿ, ಸರ್ಕಾರಿ ಪ್ರೌಢಶಾಲೆ ಕೊಡ್ಲು ಹಾಗೂ ಗುಡ್ಡೇಕೇರಿ ಪ್ರೌಢಶಾಲೆ ಭಾಗವಹಿಸಿದ್ದವು.. ಅಂತಿಮವಾಗಿ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮಕ್ಕಳು ನಾವು ಏಕೆ ಚಾಂಪಿಯನ್ಸ್ ಅಂತಾ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಮಕ್ಕಳಿಗೆ ಅತ್ಯುತ್ತಮ ತರಬೇತಿ ನೀಡಿದ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ವೀರೇಶ್ ಟಿ ಹಾಗೂ ಸಹಕಾರ ನೀಡಿದ ಎಲ್ಲಾ ಶಿಕ್ಷಕರಿಗೆ, ವಿಜಯಿ ಶಾಲಿಯಾದ ಅಶ್ವಿನಿ ಪ್ರಭುಗೌಡರ್ ತುಂಬಿಗಿ ಹಾಗೂ ನಮ್ರತಾ ಮೋಹನ್ ಅವರಿಗೆ..‌ಪೋಷಕರ ಪರವಾಗಿ, ಮಕ್ಕಳ ಪರವಾಗಿ ಎಸ್ ಡಿ ಎಂ ಸಿ ಪರವಾಗಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಎಂ ಜಿ ಹಾಗೂ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

Oplus_131072

Leave a Reply

Your email address will not be published. Required fields are marked *