- ಆಸ್ಪತ್ರೆ ಪಕ್ಕದ ಮೋರಿ ದುರ್ನಾತ – ಸ್ಥಳೀಯರ ಅಕ್ರೋಶ
- ಮಳಲಿಕೊಪ್ಪ ಧರಣೇಶ್ ಗರಂ ಆಗಿದ್ಯಾಕೆ?

ಶಿವಮೊಗ್ಗ /ಚಿಕ್ಕಮಗಳೂರು : ತೀರ್ಥಹಳ್ಳಿ ಹಾಗೂ ಕೊಪ್ಪ ಗಡಿಯಲ್ಲಿರುವ ಕಮ್ಮರಡಿಯಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ಜನ ಸಾಮಾನ್ಯರಿಗೆ ಉತ್ತಮ ಸೌಲಭ್ಯ ಕೊಡುವಲ್ಲಿ ವಿಫಲವಾಗಿದ್ದು,ಇಂದು ಮದ್ಯಾನ ದ ನಂತರ ರಜೆ ಇದೇ ಆದರೆ ರಜೆ ಇಲ್ಲದಿರುವ ಸಮಯವೂ 4ಗಂಟೆ ನಂತರ ಆಸ್ಪತ್ರೆ ಬೀಗ ಹಾಕಲಾಗುತ್ತದೆ. ಈ ವಿಷಯವಾಗಿ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು,4 ಗಂಟೆ ನಂತರ ಅಪಘಾತ ಅಥವಾ ಚಿಕಿತ್ಸೆಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತಾ? ಎಂಬುದು ಬಗೆಹರಿಯದ ಪ್ರಶ್ನೆಯಾಗಿದೆ.

ಸಂಜೆ ಬಳಿಕ ಆಸ್ಪತ್ರೆ ಇಲ್ಲದಿದ್ದರೂ ಕೊನೆಯ ಪಕ್ಷ ತುರ್ತು ನಿರ್ವಹಣೆಗಾಗಿ ಆಂಬುಲೆನ್ಸ್ ಕೂಡ ಇಲ್ಲ, ಜೊತೆಗೆ ಆಸ್ಪತ್ರೆ ಸುತ್ತಮುತ್ತಲಿನಲ್ಲಿರುವ ಮೋರಿ ಗಬ್ಬು ನಾರುತಿದ್ದು ರೋಗ ರುಜಿನಗಳು ಹೆಚ್ಚುವ ಸಂಭವಿದೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಶಾಸಕರು ಈ ಬಗ್ಗೆ ಗಮನ ಹರಿಸಲಿ ಎಂದು ಬ್ಲಾಕ್ ಕಾಂಗ್ರೆಸ್ ಕಿಸಾನ್ ಸೇಲ್ ಅಧ್ಯಕ್ಷ ಮಳಲಿಕೊಪ್ಪ ಧರಣೇಶ್ ವ್ಯವಸ್ಥೆ ವಿರುದ್ಧ ಗರಂ ಆಗಿದ್ದಾರೆ.ಈ ಬಗ್ಗೆ ಸತ್ಯಶೋಧ ಮಾಧ್ಯಮ ಸಾರ್ವಜನಿಕರನ್ನು ಪ್ರಶ್ನೆ ಮಾಡಿದ್ದು, ಮೊದಲಿಂದಲೂ ಇಲ್ಲಿನ ಹಾಳಾದ ವ್ಯವಸ್ಥೆ ಬಗ್ಗೆ ಧ್ವನಿ ಎತ್ತಿದ್ದೇವೆ ನಮ್ಮ ಮನವಿಗೆ ಸರ್ಕಾರವಾಗಲಿ ಅಥವಾ ಅಧಿಕಾರಿಗಳಾಗಲಿ ಸ್ಪಂದಿಸದಿರುವುದು ಶೋಚನಿಯವಾಗಿದೆ. ಈ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದು ಬೇಸರದ ಸಂಗತಿ ಎಂದರು.

