– 20 ವರ್ಷಗಳಿಂದ ಟೆಂಡರ್ ಮಾಡದಿರಲು ಕಾರಣವೇನು? – ಸಾರ್ವಜನಿಕ ವಲಯದಲ್ಲಿ ಗುಸುಗುಸು

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗರವಳ್ಳಿ ರೆಂಜರ್ ಆಫೀಸ್ ಬಸ್ಟ್ಯಾಂಡ್ ಮಳಿಗೆ ಟೆಂಡರ್ ಸು 20 ವರ್ಷಗಳಿಂದ ಕರೆಯದಿರುವುದು ಒಂದಷ್ಟು ಅನುಮಾನಗಳಿಗೆ ಕಾರಣವಾಗಿದ್ದು ಜೊತೆಗೆ ಯುವಕರ ಅಸಮಾಧಾನಕ್ಕೂ ಕಾರಣವಾಗಿದೆ.

*ನಿರುದ್ಯೋಗಿ ಯುವಕರ ಪತ್ರದಲ್ಲೇನಿದೆ* ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮೇಗರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇಗರವಳ್ಳಿ ಗ್ರಾಮದ ನಾವುಗಳು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಮೇಗರವಳ್ಳಿ ಗ್ರಾಮದ ಚಿಕನ್ ಅಂಗಡಿ ಮಳಿಗೆಯನ್ನು ಬಹಿರಂಗ ಹರಾಜು ಹಾಕುತ್ತಿದ್ದು ಇದರಿಂದ ಒಬ್ಬರಿಗೆ ಮಾತ್ರ ಉದ್ಯೋಗಾವಕಾಶ ದೊರಕುತ್ತಿತ್ತು ದುಡ್ಡಿನ ವ್ಯಕ್ತಿ ಮಾತ್ರ ಹರಾಜಿನಲ್ಲಿ ಭಾಗವಹಿಸಿ ಹರಾಜು ಪಡೆಯುತ್ತಿದ್ದಾರೆ.ಈ ಬಗ್ಗೆ ನಾವು ಹಲವು ಬಾರಿ ಹೇಳಿದರೂ ಈ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದು ತಾವು ನಮ್ಮ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡು ಹರಾಜನ್ನು ರದ್ದುಪಡಿಸಿ ಷರತ್ತು ಬದ್ಧ ಅಂಗಡಿ ವೈಯಕ್ತಿಕ ಪರವಾನಿಗೆ ನೀಡಬೇಕಾಗಿ ತಮ್ಮಲ್ಲಿ ಮನವಿ ಮಾಡಿರುತ್ತೇವೆ.ಹಾಗೂ ಮುಖ್ಯ ರಸ್ತೆಯ ಬಸ್ ಸ್ಟ್ಯಾಂಡ್ ಅಂಗಡಿ ಮಳಿಗೆಯನ್ನು ಸುಮಾರು 15 ವರ್ಷಗಳಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಹರಾಜಿನಲ್ಲಿ ಸೇರಿಸಿರುವುದಿಲ್ಲ ಎರಡು ಕೋಳಿ ಅಂಗಡಿಯನ್ನು ಹರಾಜಿನಲ್ಲಿ ಸೇರಿಸಿದ್ದು ಅದರ ಕಾಲಾವಧಿ ಒಂದು ವರ್ಷ ಮಾತ್ರ ಇರುತ್ತದೆ ಆದರೆ ಬಸ್ ಸ್ಟ್ಯಾಂಡ್ ಅಂಗಡಿಗೆ ಯಾವುದೇ ಹರಜಿನಲ್ಲಿ ಸೇರಿರುವುದಿಲ್ಲ ಇದನ್ನು ಸಹ ಹರಾಜಿನಲ್ಲಿ ಸೇರಿಸಬೇಕಾಗಿ ಮನವಿ ಮಾಡಿರುತ್ತೇವೆ. ನಮ್ಮ ಮನವಿಯನ್ನು ತಾವು ಪರಿಶೀಲಿಸಿ ನಮಗೆ ನಮ್ಮ ಗ್ರಾಮದ ನಿರುದ್ಯೋಗಿ ಯುವಕ ಯುವತಿಯರಿಗೆ ಮತ್ತು ಉದ್ಯೋಗಕ್ಕೆ ಅವಕಾಶ ಮತ್ತು ಅನುಕೂಲ ಮಾಡಿಸಿ ಕೊಡಬೇಕಾಗಿ ತಮ್ಮಲ್ಲಿ ಈ ಮೂಲಕ ಕೋರುತ್ತೇವೆ.

Leave a Reply

Your email address will not be published. Required fields are marked *