• ಯುಗಾದಿ ಹಬ್ಬದ ಮಹತ್ವ ತಿಳಿಯಿರಿ

ಯುಗಾದಿ ಎಂಬ ಹೆಸರು ಸಂಸ್ಕೃತ ಪದಗಳಾದ “ಯುಗ” ಅಂದರೆ ಯುಗ ಮತ್ತು “ಆದಿ” ಎಂಬ ಅರ್ಥದಿಂದ ಹುಟ್ಟಿಕೊಂಡಿದೆ.ಮುಖ್ಯವಾಗಿ ಚೈತ್ರ ಮಾಸದ ಮೊದಲ ದಿನದಂದು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ, ಸಾಮಾನ್ಯವಾಗಿ ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಆರಂಭದಲ್ಲಿ ಆಚರಣೆ ಮಾಡುವ ಹಿಂದೂಗಳ ಮಹತ್ವದ ಹಬ್ಬವಾಗಿದೆ.ಯುಗಾದಿ ಹಬ್ಬವು ಹಿಂದೂ ಕ್ಯಾಲೆಂಡರ್‌ಗೆ ಅನುಗುಣವಾಗಿ ಹೊಸ ವರ್ಷದ ಆರಂಭವನ್ನು ಸೂಚಿಸುವುದಲ್ಲದೆ ತಮ್ಮಲ್ಲಿ ಹೊಸ ಉತ್ಸಾಹ, ಹೊಸ ಆರಂಭ ಹೊಸ ಬದುಕಿಗೆ ದೇವರಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮೊರೆ ಹೋಗುತ್ತಾರೆ.ಪುರಾಣಗಳ ಪ್ರಕಾರ ಜಗತ್ತನ್ನು ವಿನಾಶದಿಂದ ರಕ್ಷಿಸಲು ಮತ್ಸ್ಯ ರೂಪದಲ್ಲಿ ಪ್ರಕಟವಾದ ಭಗವಾನ್ ವಿಷ್ಣುವಿನ ದೈವಿಕ ಹಸ್ತಕ್ಷೇಪದೊಂದಿಗೆ ಇದು ಸಂಬಂಧಿಸಿದೆ. ಈ ಮಂಗಳಕರ ದಿನವನ್ನು ದೊಡ್ಡ ಅದೃಷ್ಟದ ಸಮಯವೆಂದು ಹೇಳಲಾಗುತ್ತದೆ.ಇನ್ನು ರಾಜ್ಯದೇಲ್ಲೆಡೆ ಮಹಿಳೆಯರು ಮನೆಯನ್ನು ಸಗಣಿಯಿಂದ ಸಾರಿಸಿ ಮಾವಿನ ತೋರಣ ಕಟ್ಟಿ ರಂಗೋಲಿಯಿಂದ ಹಬ್ಬವನ್ನು ಸ್ವಾಗತಿಸಲಾಗುತ್ತದೆ.

Leave a Reply

Your email address will not be published. Required fields are marked *