ಕಡಿದಾಳು ಮಂಜಪ್ಪ ಸಭಾ ಭವನದಲ್ಲಿ ಸುವರ್ಣ ಮಹೋತ್ಸವ ಸಮಾರಂಭ – ಸ್ಮರಣ ಸಂಚಿಕೆ, ನೂತನ ಕಟ್ಟಡ ಶಂಕು ಸ್ಥಾಪನೆ ಕಾರ್ಯಕ್ರಮ.

ತೀರ್ಥಹಳ್ಳಿ : ತಾಲೂಕಿನ ಅಭಿವೃದ್ಧಿಹೊಂದಿರುವ ಸೊಸೈಟಿಗಳಲ್ಲಿ ಹಾರೋಗೊಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಂಚೂಣಿಯಲ್ಲಿದೆ.ಷೇರುದಾರ ಸದಸ್ಯರಿಗೆ ಸಕಾಲದಲ್ಲಿ ಕೃಷಿ ಚಟುವಟಿಕೆಗೆ ಬೇಕಾಗುವ ಸಾಲವನ್ನು ಡಿ ಸಿಸಿ ಬ್ಯಾಂಕ್ ನೆರವಿಂದ ಒದಗಿಸಿ ತನ್ನ ಸೇವೆ ಸಲ್ಲಿಸುತ್ತಿದ್ದು ಇದೀಗ ಹಾರೋಗೊಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 50 ವರ್ಷ ಪೂರೈಸಿದ್ದು ಸೊಸೈಟಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.

ಡಿ 25 ರ ಗುರುವಾರ ಕಡಿದಾಳು ಮಂಜಪ್ಪ ಸಭಾ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಕಾರ್ಯಕ್ರಮದ ಉದ್ಘಾಟನೆಯನ್ನು ಜೊತೆಗೆ ಸ್ಮರಣ ಸಂಚಿಕೆಯ ಲೋಕಾರ್ಪಣೆಯನ್ನು ಶಾಸಕರಾದ ಆರಗ ಜ್ಞಾನೇಂದ್ರ ನೆರವೇರಿಸಿದರು.ಜೊತೆಗೆ ನೂತನ ಕಟ್ಟಡ ಶಂಕು ಸ್ಥಾಪನೆಯನ್ನು ಎಂ ಎ ಡಿ ಬಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರು ನೆರವೇರಿಸಿದರು.ಕಡಿದಾಳು ಪ್ರಕಾಶ್ ತಮ್ಮ ಪ್ರಾಸ್ತವಿಕ ನುಡಿಯಲ್ಲಿ ಸೊಸೈಟಿಯ ಶುರುವಿಂದ ಇಂದಿನ ತನಕದ ಸರ್ವತೋಮುಖ ಬೆಳವಣಿಗೆ ಬಗ್ಗೆ ಹಾಗೂ ಆಡಳಿತ ಮಂಡಳಿ ಮತ್ತು ಕೆಲಸ ಮಾಡಿದ ಎಲ್ಲರನ್ನು ನೆನಪಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಕಡಿದಾಳು ದಿವಾಕರ್, ಸಹಕಾರಿ ರತ್ನ ಬಸವಾನಿ ವಿಜಯದೇವ್, ಮಾಮೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಟಿಎಪಿಸಿಎಂಎಸ್ ಅಧ್ಯಕ್ಷನಾಗರಾಜ್ ಶೆಟ್ಟಿ, ಹಾರೋಗೊಳಿಗೆ ಗ್ರಾ.ಪಂ.ಅಧ್ಯಕ್ಷೆ ಭಾರತಿ ಮೋಹನೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *