
ತೀರ್ಥಹಳ್ಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತೆಮ್ಮೆಮನೆ ಶಾಲಾ ಆವರಣದಲ್ಲಿ ನಡೆದ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ. ಹುರುಳಿ ಚಿಂತಾಮಣಿ ನರಸಿಂಹ ಸ್ವಾಮಿ ದೇವಸ್ಥಾನದ ಭಕ್ತ ವೃಂದ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಅನಂತ ಭಟ್ ಅವರು ಉದ್ಘಾಟನೆ ಮಾಡಿದರು.

ವಲಯ ಮೇಲ್ವಿಚಾರಕರಾದ ಶ್ರೀನಿವಾಸ ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಒಕ್ಕೂಟ ಅಧ್ಯಕ್ಷರಾದ ಶ್ರೀಯುತ ಭಾಸ್ಕರ್ ಆಚಾರ್ಯ ಅವರು ವಹಿಸಿದ್ದರು,ಎಸ್ಡಿಎಂಸಿ ಅಧ್ಯಕ್ಷ ರಾದ ಗಿರೀಶ್ ಹಾಗೂ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾಗಿರುವ ಶ್ರೀಮತಿ ಸುಜಾತ ಅವರು ಭಾಗವಹಿಸಿದ್ದರು. ಯೋಜನೆಯ ನಾಲೂರ್ ಶೌರ್ಯ ಘಟಕದ ಅಧ್ಯಕ್ಷರಾದ ಮುರುಳಿಧರ್ ಭಟ್ ಎಂ ಐ ಓ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರಾದ ಶ್ರೀಮತಿ ಭವ್ಯಾರವರು ಉತ್ತಮವಾದ ಮಾಹಿತಿ ನೀಡಿ ಕ್ಯಾನ್ಸರ್ ರೋಗ ಹರಡುವ ಬಗ್ಗೆ ಮಾಹಿತಿ ನೀಡಿದರು ಸೇವಪ್ರತಿನಿಧಿ ರಾಮು ಅವರು ಕಾರ್ಯಕ್ರಮ ನಿರೂಪಿಸಿದರು.

