
ಶ್ರೀ ವಿಶ್ವಾವಸು ನಾಮ ಸಂವತ್ಸರದ ಮೊದಲ ದಿನ. ಪುರಾಣಗಳ ಪ್ರಕಾರ, ಯುಗಾದಿ ದಿನದಂದು ಬ್ರಹ್ಮದೇವನು ಬ್ರಹ್ಮಾಂಡವನ್ನು ಸೃಷ್ಟಿಸಲು ಪ್ರಾರಂಭಿಸಿದನು ಎಂದು ಹೇಳಲಾಗುತ್ತದೆ.ಅದಾದ ಬಳಿಕ ಬ್ರಹ್ಮನು ಸಮಯ ತಿಳಿಯಲು ವರ್ಷಗಳು, ವಾರಗಳು, ದಿನಗಳು ಮತ್ತು ತಿಂಗಳನ್ನು ಸೃಷ್ಟಿಸಿದನು.

ಆದ್ದರಿಂದ, ಯುಗಾದಿಯ ದಿನವನ್ನು ಬ್ರಹ್ಮಾಂಡದ ಸೃಷ್ಟಿಪ್ರಕ್ರಿಯೆ ಪ್ರಾರಂಭವಾದ ಮೊದಲ ದಿನವೆಂದು ಪರಿಗಣಿಸಲಾಗಿದೆ. ಹಿಂದೆ ದಕ್ಷಿಣ ಭಾರತವನ್ನು ಆಳುತ್ತಿದ್ದ ಶಾಲಿವಾಹನನು ತನ್ನ ವಿಜಯದ ಸಂಕೇತವಾಗಿ ಶಾಲಿವಾಹನ ಶಕೆ ಪ್ರಾರಂಭಿಸಿದ್ದು ಕೂಡ ಇದೇ ದಿನ. ಶಿಶಿರಋತು ಕಳೆದು ಹೊಸಚಿಗುರು, ಎಲೆ, ಹೂವುಗಳಿಗೆ ಕಾರಣವಾಗಿ ಚೈತ್ರದ ಆಗಮನವು ಸಂತಸದ ಸಮಯವನ್ನು ಬಿಂಬಿಸುತ್ತದೆ.ಯುಗಾದಿ ಹಬ್ಬ ಹೊಸ ಆರಂಭ, ಸಂತೋಷ, ಶುದ್ಧತೆ ಮತ್ತು ಜೀವನದ ಎಲ್ಲಾ ಅನುಭವಗಳನ್ನು ಸಮಾನವಾಗಿ ಸ್ವೀಕರಿಸುವ ಧ್ಯೇಯವನ್ನು ಪ್ರತಿನಿಧಿಸುತ್ತದೆ.

ಇದು ಭಾರತೀಯ ಸಂಸ್ಕೃತಿಯ ಒಂದು ಮಹತ್ವದ ಭಾಗವಾಗಿದ್ದು, ಭಕ್ತಿ, ಹಬ್ಬ, ಸಾಂಪ್ರದಾಯಿಕ ಆಹಾರ ಹಾಗೂ ಕುಟುಂಬದ ಒಗ್ಗಟ್ಟನ್ನು ಉತ್ತೇಜಿಸುತ್ತದೆ ಎಂಬುದು ಪ್ರತೀತಿ.

