- ಮನೆ ಮದ್ದು ತಿಳಿಯಲು ಲಿಂಕ್ ಒತ್ತಿ

ಬೇಸಿಗೆಯಲ್ಲಿ ವೈರಸ್ಗಳಿಂದ ಬಾಧಿಸುವ ಸಮಸ್ಯೆಗಳಲ್ಲಿ ಸರ್ಪ ಸುತ್ತು ಕೂಡ ಒಂದು.ದೇಹದ ಒಂದೇ ಕಡೆ ನೀರು ಗುಳ್ಳೆ ಎದ್ದು ಹಾವಿನ ಆಕಾರದಲ್ಲಿ ಮೂಡುವ ಇದನ್ನು ಸರ್ಪ ಸುತ್ತು ಎಂದು ಕರೆಯುವರು.ಗುಳ್ಳೆಗಳು ನರತಂತುಗಳನ್ನು ಬಾಧಿಸುವುದರಿಂದ ಉರಿ ಹಾಗೂ ತುರಿಕೆಯು ವಿಪರೀತವಾಗಿರುತ್ತದೆ. ಹಳ್ಳಿ ಮದ್ದಿನಿಂದ ಈ ಕಾಯಿಲೆಯನ್ನು ಗುಣ ಪಡಿಸಬಹುದು – ಹಳೆ ಅಕ್ಕಿ ಗಂಜಿ, ಬೇಯಿಸಿದ ಹೆಸರು ನೀರು, ಕೊತ್ತಂಬರಿಯ ನೀರು, ಎಳನೀರು ಸೇವಿಸುವುದು ದೇಹವನ್ನು ತಂಪಾಗಿಸುತ್ತದೆ.- ಗರಿಕೆ ಹುಲ್ಲನ್ನು ಬೇರು ಸಮೇತ ಕಿತ್ತು ಚೆನ್ನಾಗಿ ನೀರಿನಲ್ಲಿ ತೊಳೆದು ಪೇಸ್ಟ್ ಮಾಡಿ ಸರ್ಪ ಸುತ್ತು ಆದ ಜಾಗಕ್ಕೆಲ್ಲಾ ಹಚ್ಚುವುದರಿಂದ ಗಾಯವು ಒಣಗುತ್ತವೆ.- ಗೋಟು ಅಡಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ದಿನಕ್ಕೆ ನಾಲ್ಕು ಬಾರಿ ಗುಳ್ಳೆಗಳಿಗೆ ಲೇಪಿಸುವುದರಿಂದ ಗುಣಮುಖ ಕಾಣುತ್ತದೆ.- ಕೆಂಪು ಅಥವಾ ಬಿಳಿ ಅಗಸೆ ಸೊಪ್ಪನ್ನು ತಣ್ಣೀರಿನಲ್ಲಿ ನುಣ್ಣಗೆ ಅರೆದು ಹಚ್ಚುವುದು- ಶ್ರೀಗಂಧವನ್ನು ಅರೆದು ಸರ್ಪಸುತ್ತು ಇರುವಲ್ಲಿ ಹಚ್ಚುತ್ತಿದ್ದರೆ ಬೇಗನೇ ಗುಣ ಮುಖವಾಗುತ್ತದೆ.- ಒಳ್ಳೆ ಕುಡಿಯನ್ನು ಗೋಮುತ್ರದಲ್ಲಿ ದಲ್ಲಿ ಮೂರು ಹೊತ್ತು ಚೆನ್ನಾಗಿ ಲೇಪಿಸಬೇಕು.
