- ಪುಟಾಣಿಗಳಿಗೆ ವಾದ್ಯ ಗೋಷ್ಠಿ ಜೊತೆಗೆ ಹೂಮಳೆಯ ಸ್ವಾಗತ
- ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಯ್ತು ಹೊನ್ನೇತಾಳು ಶಾಲೆ

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳುವಿನಲ್ಲಿ ಬೇಸಿಗೆ ರಜೆ ಮುಗಿದು ಮರಳಿ ಶಾಲೆಗೆ ಬಂದ ಮಕ್ಕಳನ್ನು ಶಾಲೆಯ ಎಸ್ ಡಿ ಎಮ್ ಸಿ ಹಾಗೂ ಶಿಕ್ಷಕರು ಮತ್ತು ಪೋಷಕರು ವಾದ್ಯದ ಜೊತೆಗೆ ಹುಮಳೆ ಸುರಿಸಿ ಬರ ಮಾಡಿಕೊಂಡರು.ಈ ವೇಳೆ ಹೊಸದಾಗಿ ದಾಖಲಾತಿ ಪಡೆದ ಎಲ್ ಕೆಜಿ ಮತ್ತು ಯು ಕೆಜಿ ಮಕ್ಕಳಿಗೆ ತಮ್ಮ ಮೊದಲ ದಿನದ ಸಂಭ್ರಮದ ಹಿನ್ನಲೆ ಕೆಂಪು ಹಾಗೂ ಅರಿಶಿನ ವಿರುವ ಬೆರಳಚ್ಚನ್ನು ಬೋರ್ಡ್ ಗೆ ಲೇಪಿಸಿ ಶಾಲೆಗೆ ಪ್ರವೇಶ ನೀಡಲಾಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶಿಲ್ಪಾರವರು ಸ್ವಾಗತ ಭಾಷಣ ಮಾಡಿದರು. ಅತಿಥಿ ಶಿಕ್ಷಕಿಯಾದ ಕು ಸೌರಭ ಪ್ರಾರ್ಥನೆ ಮಾಡಿದರು.ಇನ್ನೂ ಈ ಸಂದರ್ಭದಲ್ಲಿ ಎಲ್ ಕೆಜಿ ಮತ್ತು ಯು ಕೆಜಿ ಮಕ್ಕಳಿಂದ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ್ದು ವಿಶೇಷವಾಗಿತ್ತು.ಜೊತೆಗೆ ಮಕ್ಕಳು ಭಗವದ್ಗೀತದ ಶ್ಲೋಕವನ್ನು ಪಠಿಸಿದರು.

ಕಾರ್ಯಕ್ರಮದಲ್ಲಿ ತನ್ನ ತಂಡದೊಂದಿಗೆ ಬಂದು ಮಕ್ಕಳ ಸಂಭ್ರಮದಲ್ಲಿ ಭಾಗಿಯಾದ ಕಮ್ಮರಡಿ ಬ್ಯಾಂಡ್ ಸೆಟ್ ಮೋಹನ್ ಅವರಿಗೆ ಹಾಗೂ ಯೂಟ್ಯೂಬರ್ ವಿಶೃತ್ ಶರ್ಮ ಹಾಗೂ ಅಜಯ್ ಕುಮಾರ್ ಶರ್ಮ ಇವರಿಗೆ ಶಾಲಾ ಬಳಗದಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಮಸ್ವಾಮಿ ಮೇದೋಳಿಗೆಯವರು “ಮಕ್ಕಳು ಗಣಪತಿ ಮಾಡುವ ಮಣ್ಣಿನ ಹಾಗೆ ಅವರನ್ನ ಯಾವ ರೀತಿ ಬೇಕಾದರೂ ತಿದ್ದಬಹುದು ಎಂದರು.ಕಾರ್ಯಕ್ರಮದ ಕೇಂದ್ರ ಬಿಂದು ಪರಿಸರಪ್ರೇಮಿ ಹಾಗೂ ಇತಿಹಾಸ ಸಂಶೋಧಕರಾದ ಅಜಯ್ ಕುಮಾರ್ ಶರ್ಮ ರವರು ಮಾತನಾಡಿ ಶಿವಮೊಗ್ಗ ಜಿಲ್ಲೆಯ ಜನಪ್ರಿಯತೆಯನ್ನು ಸಂಕ್ಷಿಪ್ತವಾಗಿ ವರ್ಣಿಸುವುದರ ಜೊತೆಗೆ ಪುಟಾಣಿಗಳು ಮಾತೃಭಾಷೆ ಕನ್ನಡದಲ್ಲೇ ಕಲಿಯಿರಿ. ಮುಂದೆ ದೊಡ್ಡ ಹುದ್ದೆಯಲ್ಲಿ ನಿಮ್ಮನ್ನು ನೋಡಲಾಸೆ ಎಂದು ಅಭಿಪ್ರಾಯ ಪಟ್ಟರು.

ಫೋಟೋ ಕಾರ್ನಾರ್ ನಲ್ಲಿ ತಮ್ಮತಮ್ಮ ಮಕ್ಕಳೊಂದಿಗೆ ಫೋಟೋ ಕ್ಲಿಕ್ಕಿಸಿ ಪೋಷಕರು ವಿದ್ಯಾರ್ಥಿಗಳು ಸಂತಸ ಪಟ್ಟರು.

ಈ ವೇಳೆ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ನಿತ್ಯನಂದ ಅಣುಗೋಡು, ಉಪಾಧ್ಯಕ್ಷರಾದ ಅಶ್ವಿನಿ, ಅರುಣ್ ಮಂಜುನಾಥ್. ಕನ್ನಡ ಸಾಹಿತ್ಯ ಪರಿಷತ್ ಆಗುಂಬೆ ಹೋಬಳಿ ಅಧ್ಯಕ್ಷರಾದ ವೆಂಕಟೇಶ್, ಶಾಲೆಯ ಶಿಕ್ಷಕರ ವೃಂದ, ಪೋಷಕರು, ಬಿಸಿಯೂಟ ಸಿಬ್ಬಂದಿ, ಪುಟಾಣಿ ಮಕ್ಕಳು ಇದ್ದರು.



