
ಶಿವಮೊಗ್ಗ : ಮಾಜಿ ಸಭಾಪತಿ ಹಾಗೂ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರಿಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಶಿವಮೊಗ್ಗ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.

ಕಾಗೋಡು ತಿಮ್ಮಪ್ಪನವರು ಹೋರಾಟ, ಶೋಷಿತರ ಪರ ಧ್ವನಿ, ನೇರ ಮಾತುಗಾರ, ಪ್ರತಿ ಪಕ್ಷದವರು ಇಷ್ಟಪಡುವಂತಹ ನಾಯಕ, ಗೇಣಿ ರೈತರ ಸಮಸ್ಯೆ ಹೋರಾಟ, ಸಮಾಜವಾದಿ ರೈತ ಪರ ಹೋರಾಟಕ್ಕಾಗಿ, ಹಳ್ಳಿ ಹಳ್ಳಿಗೂ ಸೈಕಲ್ ನಿಂದ ಪ್ರವಾಸ ಮಾಡಿ, ಜನರನ್ನು ಜಾಗೃತಗೊಳಿಸಿದವರು

ಹಿಂದುಳಿದ ವರ್ಗದ ರೈತರ ಜನಸಾಮಾನ್ಯರ ಪರ ಗಟ್ಟಿ ಧ್ವನಿಯಾಗಿ, ಆ ಸಮಯದಲ್ಲಿ ಅನೇಕ ಗೇಣಿದಾರರಿಗೆ, ಭೂಮಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಗೌರವ ಡಾಕ್ಟಾರೆಟ್ ಘೋಷಣೆಯಾಗಿರುವುದು ಅವರ ಆಪ್ತ ಬಳಗ ಹಾಗೂ ಅಭಿಮಾನಿಗಳಿಗೆ ಖುಷಿ ನೀಡಿದ್ದು ಎಲ್ಲೆಡೆ ಸಂಭ್ರಮಿಸಿದ್ದಾರೆ.


