

ತೀರ್ಥಹಳ್ಳಿ : 2025-26 ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ತಾಳೆ ಬೆಳೆ ಯೋಜನೆಯಡಿ ಹೊಸದಾಗಿ ತಾಳೆ ಬೆಳೆ ಯನ್ನು ಬೆಳೆಯಲು ಇಚ್ಛಿಸುವ ರೈತರಿಗೆ ಉಚಿತವಾಗಿ ತಾಳೆ ಸಸಿಗಳನ್ನು ವಿತರಿಸಿ ಪ್ರಸ್ತುತ ವರ್ಷ ಹಾಗಿ ಮುಂದಿನ 3 ವರ್ಷಗಳ ವರೆಗೆ ನೆಟ್ಟ ಸಸಿಗಳ ನಿರ್ವಹಣೆಗಾಗಿ ಸಹಾಯಧನ ನೀಡಲು ಅವಕಾಶವಿರುತ್ತದೆ. ಹೊಸದಾಗಿ ತಾಳೆ ಬೆಳೆಯನ್ನು ಅಭಿವೃದ್ಧಿ ಪಡಿಸಲು ಇಚ್ಛಿಸುವ ತೀರ್ಥಹಳ್ಳಿ ತಾಲೂಕಿನ ಸಾಮಾನ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರು ತೀರ್ಥಹಳ್ಳಿ ತಾಲೂಕಿನ ತೋಟಗಾರಿಕೆ ಇಲಾಖೆ ಕಛೇರಿಯಲ್ಲಿ ದಿ. 28-05-2025 ರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಕುಶಾವತಿ ಇಲ್ಲಿ ಸಂಪರ್ಕಿಸಿ.

ಬೇಕಾಗುವ ದಾಖಲೆಗಳು – ದಿ 01 – 04- 2025 ರ ನಂತರದ RTC – ಆಧಾರ್ ಕಾರ್ಡ್ ಜೆರಾಕ್ಸ್ – ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ – RTC ಜಂಟಿ ಖಾತೆಯಾಗಿದ್ದಲ್ಲಿ ಒಪ್ಪಿಗೆ ಪತ್ರ ಸಲ್ಲಿಸಿ – SC /ST ಪಲಾನುಭವಿಯಾಗಿದ್ದಲ್ಲಿ RD ನಂಬರ್ ಇರುವ ಜಾತಿ ಪ್ರಮಾಣ ಪತ್ರ ಜೆರಾಕ್ಸ್


