ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿಯ ಹೊಸೂರು ಗುಡ್ಡೇಕೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಂಜು ಬಾಬು ಹೆಚ್ ಪಿ ಕೌನ್ಸಲಿಂಗ್ ನಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ವರ್ಗಾವಣೆಯಾಗಿದ್ದು,

ಈ ವಿಷಯ ತಿಳಿಯುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ, ಹಾಗೂ ಗ್ರಾಮಸ್ಥರು, ಜೊತೆಗೆ ಮುಖಂಡರುಗಳಿಗೆ ಬೇಸರ ತರಿಸಿದೆ. ಮಂಜು ಬಾಬು ಇವರ ಶ್ರಮದಿಂದ ಹೊಸೂರು – ಗುಡ್ಡೆಕೇರಿ ಶಾಲೆಗೆ ಆಂಗ್ಲ ಮಾಧ್ಯಮ ಕೂಡ ಬಂದಿದೆ,ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೈಟ್ ಕ್ಲಾಸ್ ಕೂಡ ಮಾಡುತ್ತಿದ್ದು ಜೊತೆಗೆ ಖಾಸಗಿ ಕಂಪನಿಯ

ಸಹಕಾರ ಸಿಗುವಲ್ಲಿ ಇವರ ಪತ್ರ ದೊಡ್ಡದಿದೆ.ಇದೆಲ್ಲವನ್ನು ಗಮದಲ್ಲಿಟ್ಟುಕೊಂಡು ಮಂಜು ಬಾಬು ಇವರನ್ನು ಈ ಶಾಲೆಗೆ ಮತ್ತೆ ಕಳುಹಿಸಿಕೊಡುವಂತೆ ಈಗಾಗಲೇ ಮನವಿ ನೀಡಲು ಗ್ರಾಮಸ್ಥರು ಹಾಗೂ ಊರಿನ ಯುವ ಮುಖಂಡರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *