
ಸಿನಿಮಾಗೆ ಅಕ್ಷನ್ ಕಟ್ ಹೇಳಿದ ಹೆದ್ದೂರು ಮಂಜುನಾಥ್ ಶೆಟ್ಟಿ – ಶಾಂತಪ್ಪನ ಪಾತ್ರದಲ್ಲಿ ಮಿಂಚಿದ ಮಳಲಿಕೊಪ್ಪ ಧರಣೇಶ್

ಶಿವಮೊಗ್ಗ :ಹೆದ್ದೂರು ಮಂಜುನಾಥ್ ಶೆಟ್ಟಿ ನಿರ್ದೇಶನದಲ್ಲಿ ಪಾಠ ಶಾಲಾ ಚಿತ್ರ ಮೂಡಿ ಬಂದಿದ್ದು, ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ,ಈ ಚಿತ್ರವು 1990ರ ದಶಕದಲ್ಲಿ ಅರಣ್ಯ ಇಲಾಖೆ ಹಾಗೂ ರೈತರ ಸಂಘರ್ಷ ಜೊತೆಗೆ ಅಂದಿನ ಮಕ್ಕಳ ಹಾಗೂ ಹಿರಿಯರ ನಡುವಿನ ಸಂಬಂಧವನ್ನ ಬಿಂಬಿಸುವ ಕಥಾ ಹಂದರ ಸಿನಿಮಾವಾಗಿದ್ದು,

ಜೊತೆಗೆ ಈ ಚಿತ್ರದಲ್ಲಿ ಕಾಂಗ್ರೆಸ್ ರೈತ ಘಟಕ ತೀರ್ಥಹಳ್ಳಿಯ ಅಧ್ಯಕ್ಷರಾದ ಮಳಲಿಕೊಪ್ಪ ಧರಣೇಶ್ ಕಿರಣ್ ನಾಯ್ಕ್ ರವರ ಸ್ನೇಹಿತರಾಗಿ ಶಾಂತಪ್ಪ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ.ರೈತರ ನೋವಿಗೆ ಸ್ಪಂದಿಸುವ ಶಾಂತಪ್ಪ ಎನ್ನುವ ಪಾತ್ರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇನ್ನು ಪಾಠಶಾಲಾ ಸಿನಿಮಾ ಚಿತ್ರೀಕರಣ ತೀರ್ಥಹಳ್ಳಿ ಆಸುಪಾಸಿನಲ್ಲಿ ನಡೆದಿದ್ದು,ಅಲ್ಲಿಯ ಜನರ ಜೀವನ ಶೈಲಿ, ಭಾಷೆ, ಆಚರಣೆ ಬಗ್ಗೆ ಚಿತ್ರ ಒಳಗೊಂಡಿದೆ.ಜೊತೆಗೆ ತೀರ್ಥಹಳ್ಳಿಯ ಸು 40 ಮಕ್ಕಳು ಈ ಸಿನಿಮಾದಲ್ಲಿ ನಟಿಸಿದ್ದು, ಮಕ್ಕಳ ನಟನೆಗೆ ಪ್ರೇಕ್ಷಕ ಫಿದಾ ಆಗಿದಂತೂ ಸತ್ಯ.ಹಿರಿಯ ನಟ ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ನಟನ ಪ್ರಶಾಂತ್ ಮುಂತಾದವರು ತಾರಾಗಣದಲ್ಲಿದ್ದಾರೆ.


