- ಸಿಡಿಲು ಗುಡುಗಿನೊಂದಿಗೆ ಬಂದ ಮಳೆರಾಯ
- ಅಡಿಕೆ ಹರಳು ಉದುರುವ ಸಮಸ್ಯೆ ಹೆಚ್ಚು

ಶಿವಮೊಗ್ಗ : ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಜೊತೆಗೆ ಧಾರಾಕಾರ ಮಳೆಯಾಗಿದ್ದು,ಕಾದ ಭೂಮಿಗೆ ತಂಪೆರೆದಂತಾಗಿದೆ. *ತೀರ್ಥಹಳ್ಳಿಯಲ್ಲಿ ಮಳೆ* ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ, ಗಡಿಕಲ್ಲು, ಮೇಗರವಳ್ಳಿ, ಬೆಜ್ಜವಳ್ಳಿ, ಕನ್ನಂಗಿ ಆರಗ ಕಡೆಯಲ್ಲಿ ಉತ್ತಮ ಮಳೆಯಾಗಿದೆ ಎಂದು ವರದಿಯಾಗಿದೆ.ಇನ್ನು ಬಿಡದೆ 2 ದಿನಕ್ಕೊಮ್ಮೆ ಬಂದರೆ ಅಡ್ಡಿಲ್ಲ ಆದರೆ ಒಂದೇ ದಿನ ಬಂದು ಹೋದರೆ ಅಡಿಕೆ ಹರಳು ಉದುರುವ ಸಾಧ್ಯತೆ ಹೆಚ್ಚು ಎಂಬುದು ರೈತರ ಮಾತಾಗಿದೆ.


