• ಪಾಗಲ್ ಪ್ರೇಮಿಗೆ ನೇಣು ಹಾಕಿ – ಯುವತಿ ಪೋಷಕರ ಅಕ್ರೋಶ

ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್​ ಸದಸ್ಯನ ಪುತ್ರಿ ನೇಹಾ ಹಿರೇಮಠ್ ಕೊಲೆ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್​ ಠಾಣಾ ವ್ಯಾಪ್ತಿಯ ವೀರಾಪುರ ದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಆರೋಪಿ, ಯುವತಿಗೆ “ನೇಹಾ ಹಿರೇಮಠ ಥರ ಕೊಲೆ ಮಾಡ್ತೀನಿ” ಎಂದು ಬೆದರಿಸಿದ್ದ.ಇದೀಗ ಪಾಗಲ್ ಆಸಾಮಿ ಹೇಳಿದಂತೆ ಮಾಡಿದ್ದಾನೆ.ಕೊಲೆಯಾದ ಯುವತಿಯನ್ನು ಅಂಜಲಿ ಅಂಬಿಗೇರ (20) ಎಂದು ಗುರುತಿಸಲಾಗಿದ್ದು, ವಿಶ್ವ ಅಲಿಯಾಸ್​ ಗಿರೀಶ್​ ಎಂಬಾತ ಯುವತಿಯನ್ನು ಮನೆಯಲ್ಲಿ ತನ್ನ ಪೋಷಕರ ಎದುರಲ್ಲೇ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *