ತೀರ್ಥಹಳ್ಳಿ :ಮಾ. 03 ರಂದು ತಾಲೂಕಿನ ಬಿಳಲು ಕೊಪ್ಪ ಬಳಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದ್ದು,ಲಾರಿ ಚಾಲಕನ ನಿರ್ಲಕ್ಷದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಈ ಬಗ್ಗೆ ಹಾಗೂ ತೀರ್ಥಹಳ್ಳಿ ಹಾಗೂ ಆಗುಂಬೆ ಮಾರ್ಗದಲ್ಲಿ ದಿನೇ ದಿನೇ ಅಪಘಾತ ಪ್ರಕರಣ ಹೆಚ್ಚುತಿದ್ದ ವರದಿ ಜೊತೆಗೆ ಸಮಾಜಿಕ ಕಳಕಳಿಯಾಗಿ ರಸ್ತೆ ಅಪಘಾತ ತಡೆಯಲು ಜಿಗ್ ಜಾಗ್ ಮಾದರಿ ಬ್ಯಾರಿಕೆಡ್ , ಸ್ಪೀಡ್ ಲಿಮಿಟ್ ಫಲಕ, ರಸ್ತೆಗಳಲ್ಲಿ ಸುರಕ್ಷತಾ ಸೂಚನಾ ಫಲಕಗಳ ಅಳವಡಿಕೆ, ಅಪಾಯಕಾರಿ ತಿರುವುಗಳಲ್ಲಿ ತಡೆಗೋಡೆ (crash barriers) ಮತ್ತು ಬ್ಲಿಂಕರ್‌ಗಳನ್ನು ಅಳವಡಿಸುವ ಬಗ್ಗೆ ಸತ್ಯಶೋಧ ಮಾಧ್ಯಮ ವರದಿ ಮಾಡಿದ್ದು,

ಇದಕ್ಕೆ 24 ಗಂಟೆಗಳಲ್ಲಿ ಸ್ಪಂದಿಸಿದ ಆಗುಂಬೆ ಪೊಲೀಸ್ ಠಾಣೆ ಪಿ ಎಸ್ ಐ ಶಿವನ ಗೌಡ ಪಾಟೀಲ್ ನೇತೃತ್ವದಲ್ಲಿ ತೀರ್ಥಹಳ್ಳಿ ಸಮೀಪದ ಶಿವರಾಜಪುರ, ರಂಜದ ಕಟ್ಟೆ, ಮೇಗರವಳ್ಳಿ ಬಳಿ ರಂಬಲ್ ಸ್ಟ್ರಿಪ್ಸ್ ಅಳವಡಿಕೆ ಜೊತೆಗೆ ಹೆಚ್ಚು ಅಪಘಾತವಾಗುವ ಜಾಗಗಳಲ್ಲಿ ಬ್ಯಾರಿಕೆಡ್ ಅಳವಡಿಕೆ ಮಾಡಿ ಜನ ಸ್ನೇಹಿ ಪೊಲೀಸ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಬೆನ್ನಲ್ಲೇ ನ್ಯಾಷನಲ್ ನವರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ರಂಬಲ್ ಸ್ಟ್ರಿಪ್ಸ್, ಗಳನ್ನು ಅಳವಡಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನು ತುರ್ತಾಗಿ ಜನರ ಕಾಳಜಿ ಪರ ನಿಂತ ಆಗುಂಬೆ ಪೊಲೀಸ್ ಠಾಣೆಯ ಪಿ ಎಸ್ ಐ ಶಿವನ ಗೌಡ ಪಾಟೀಲ್ ಹಾಗೂ ನ್ಯಾಷನಲ್ ನವರಿಗೆ ಸತ್ಯಶೋಧ ನ್ಯೂಸ್ ಮಾಧ್ಯಮ ಅಭಿನಂದಿಸಿದೆ.

Leave a Reply

Your email address will not be published. Required fields are marked *