
ಅಂತರಾಷ್ಟ್ರೀಯ ತಬಲಾ ವಾದಕ ಜಾಕಿರ್ ಹುಸೇನ್ (73) ಹೃದಯ ಸಂಬಂಧಿ ಕಾಯಿಲೆಯಿಂದ ಭಾನುವಾರ ಅಮೆರಿಕಾದಲ್ಲಿ ಮೃತಾಪಟ್ಟಿದ್ದಾರೆ.

ಭಾರತದ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾಗಿದ್ದ ಖ್ಯಾತ ತಬಲಾ ವಾದಕ ಅಲ್ಲಾ ರಖಾ ಅವರ ಹಿರಿಯ ಪುತ್ರನಾಗಿದ್ದ ಜಾಕೀರ್ ಹುಸೇನ್, 1951 ರಂದು ಮುಂಬೈನಲ್ಲಿ ಜನಿಸಿದ್ದರು. ಚಿಕ್ಕ ವಯಸ್ಸಿನಿಂದಲೂ ಸಂಗೀತದ ವಾತಾವರಣದಲ್ಲಿ ಬೆಳೆದಿದ್ದರು. ಅವರ ತಂದೆಯ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ಜಾಕಿರ್ ಹುಸೇನ್ ಅಸಾಧಾರಣ ಪ್ರತಿಭೆಯಾಗಿ ಹೊರಹೊಮ್ಮಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದರು. ಜಾಕೀರ್ ಹುಸೇನ್ ಅವರು ಏಳು ಬಾರಿ ಗ್ರ್ಯಾಮಿ ಪ್ರಶಸ್ತಿ ನಾಮನಿರ್ದೇಶನ ಪಡೆದಿದ್ದರು. ಈ ಪೈಕಿ , ಮೂರು ಬಾರಿ ಪ್ರಶಸ್ತಿಗಳನ್ನು ಗೆದ್ದಿದ್ದರು.




